Job Description: * ಪ್ರಸ್ತುತ ಚೀನಾ ದೇಶದ ರಾಷ್ಟ್ರೀಯ ಶಾಸಕಾಂಗವು ಆಡಳಿತಾತ್ಮಕ ಕಮ್ಯುನಿಸ್ಟ್ ಪಕ್ಷವು ಇದೀಗ '3' ಮಕ್ಕಳ ನೀತಿಯನ್ನು ಅಧಿಕೃತವಾಗಿ ಅನುಮೋದಿಸಿದೆ. * ಚೀನಾ ದೇಶವು ಮೂರು ದಶಕಗಳಿಂದ ಜಾರಿಗೆ ತಂದಿರುವ ಒಂದು-ಮಗುವಿನ ನೀತಿಯು ಇದೀಗ ಸರಿ ಸುಮಾರು 400 ಮಿಲಿಯನ್ ದಂಪತಿಗಳನ್ನು ತಡೆಹಿಡಿದಂತಾಗಿದೆ ಎಂದಿದ್ದಾರೆ. * ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ರಾಷ್ಟ್ರದ ಈ ಮೂರನೇ ಮಗುವಿನ ಪಾಲಿಸಿಯು ಚೀನಾದಲ್ಲಿ ಜನನ ಪ್ರಮಾಣ ದರದಲ್ಲಿ ತೀವ್ರ ಕುಸಿತವನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಚೀನಾ ದೇಶದ ಜನಸಂಖ್ಯೆ ಹಾಗೂ ಕುಟುಂಬ ಯೋಜನೆ ಕಾನೂನು ಇದೀಗ ಚೀನಾ ರಾಷ್ಟ್ರದ ದಂಪತಿಗಳಿಗೆ ಮೂರು(3) ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡಲಿದೆ, ಹಾಗೂ ಇದನ್ನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸ್ಥಾಯಿ ಸಮಿತಿ ಅಂಗೀಕರಿಸಿದೆ. * ಚೀನಾ ದೇಶದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ 2021 ರ ಮೇ ತಿಂಗಳಿನಲ್ಲಿ ಕಟ್ಟುನಿಟ್ಟಾದ ಎರಡು-ಮಕ್ಕಳ ನೀತಿಯನ್ನು ಸಡಿಲಿಸಲು ದೇಶದ ಎಲ್ಲಾ ದಂಪತಿಗಳು ಮೂರು ಮಕ್ಕಳನ್ನು ಪಡೆಯಲು ಅವಕಾಶವನ್ನು ಮಾಡಿಕೊಟ್ಟಿದೆ. * ಈ ಹಿಂದೆ 2016 ರಲ್ಲಿ ಚೀನಾದಲ್ಲಿ ಒಂದು ಮಗುವಿನ ಪಾಲಿಸಿಯನ್ನು ರದ್ದುಗೊಳಿಸಿ ರಾಷ್ಟ್ರದ ಎಲ್ಲ ದಂಪತಿಗಳಿಗೂ ಎರಡು ಮಕ್ಕಳನ್ನು ಹೊಂದಲು ಚೀನಾ ಅನುಮತಿ ನೀಡಿತ್ತು, ಆದರೆ ಇದೀಗ 2021 ರಲ್ಲಿ ಮೂರು ಮಕ್ಕಳನ್ನು ಹೊಂದಲು ಅವಕಾಶ ನೀಡಿದೆ.