Job Description: * ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚಿಗೆ ಸುಧಾರಣೆಯೊಂದನ್ನು ಜಾರಿಗೆ ತರಲು ಮುಂದಾಗಿದೆ, ಅದುವೇ ಆನ್ ಲೈನ್ ವ್ಯವಸ್ಥೆ ಮೂಲಕ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯುವ ವ್ಯವಸ್ಥೆ, ಈ ಪೋರ್ಟಲ್ ನಿಂದಾಗಿ ಜನರು ಜನನ- ಮರಣ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಳೆಯುವದು ತಪ್ಪಲಿದೆ ಎಂದಿದ್ದಾರೆ. * ಈ ಆನ್ ಲೈನ್ ಜನನ-ಮರಣ ವ್ಯವಸ್ಥೆಯು ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ನಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ, ಹಾಗೂ ಇ-ಜನ್ಮ ಪೋರ್ಟಲ್ ಆನ್ ಲೈನ್ ನಲ್ಲಿ ಜನರೇಟ್ ಆದ ನಂಬರ್ ಬಳ್ಸಿಕೊಂಡು ಎಲ್ಲಿಯಾದರೂ ಸರ್ಟೀಫಿಕೇಟ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಆಸ್ಪತ್ರೆಗಳಲ್ಲಿ ಮಗು ಹುಟ್ಟಿದ ನಂತರ ನೀಡಲಾಗುವ ದಾಖಲಾತಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ನೀಡಬೇಕಾಗುತ್ತದೆ ಆಗ ಅಲ್ಲಿನ ಅಧಿಕಾರಿಗಳ ಇ-ಜನ್ಮಪೋರ್ಟಲ್ ನಲ್ಲಿ ತಂದೆ-ತಾಯಿ ಆಧಾರ್, ಪಾನ್ ಕಾರ್ಡ್ ಸೇರಿ ಯಾವುದಾದರೊಂದು ದಾಖಲಾತಿ ಜೊತೆಗೆ ಅಪ್ಲೋಡ್ ಮಾಡುತ್ತಾರೆ ನಂತರ ಸರ್ಟೀಫಿಕೇಟ್ ಹಾಗೂ ನೊಂದಿಗೆ ನಂಬರ್ ನ್ನು ನೀಡುತ್ತಾರೆ, ಇದೇ ರೀತಿಯಲ್ಲಿಯೂ ಮರಣದ ಮಾಹಿತಿ ಈ ಪೋರ್ಟಲ್ ನಲ್ಲಿಯೇ ಅಪ್ಲೋಡ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.