Job Description: * ಇತ್ತೀಚಿಗೆ ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಗೂ ಮಹಿಳಾ ಹಾಕಿ ತಂಡಗಳು ಉತ್ತಮ ಯಶಸ್ಸನ್ನು ಸಾಧಿಸಿವೆ, ಈ ಹಿನ್ನಲೆಯಿಂದಾಗಿ ಒಡಿಶಾ ಸರ್ಕಾರ ಇನ್ನು ಮುಂದಿನ 10 ವರ್ಷಗಳ ಕಾಲ ಪ್ರಾಯೋಜಕತ್ವ ವಿಸ್ತರಿಸಲಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ. * ಸದ್ಯ ಒಡಿಶಾ ಸರ್ಕಾರಕ್ಕೆ ಹಾಕಿ ತಂಡಗಳ ಪ್ರಾಯೋಜಕತ್ವದ ಅವಧಿ 2023 ರವರೆಗೂ ಇದೆ, ತನದನಂತರ, ಅಂದರೆ ಅಲ್ಲಿಂದ ಮುಂದಿನ 10 ವರ್ಷಗಳ ಕಾಲ ಪ್ರಾಯೋಜಕತ್ವ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಒಡಿಶಾ ಸರ್ಕಾರವು ಈ ಹಿಂದೆ 2018 ರ ಫೆಬ್ರವರಿ ತಿಂಗಳಿಂದ ಪುರುಷ ಮತ್ತು ಮಹಿಳಾ '2' ತಂಡಗಳಿಗೆ ಪ್ರಾಯೋಜಕತ್ವ ವಹಿಸಿಕೊಂಡಿದೆ. * ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಜಯಿಸಿ (ಅಂದರೆ ಸುಮಾರು 41 ವರ್ಷಗಳ ಬಳಿಕ) ಐತಿಹಾಸಿಕ ಸಾಧನೆ ಮಾಡಿದೆ, ಹಾಗೂ ಭಾರತೀಯ ಮಹಿಳಾ ತಂಡ 4 ನೇ ಸ್ಥಾನ ಪಡೆದುಕೊಂಡಿದೆ. * ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಎರಡು ತಂಡಗಳ ಆಟಗಾರರಿಗೆ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಿದ್ದಾರೆ, ಹಾಗೂ ತಂಡದ ಸಹಾಯಕ ಸಿಬ್ಬಂದಿಗೆ ತಲಾ 5 ಲಕ್ಷ ರೂ. ನೀಡಿದ್ದಾರೆ, ಇಅದರ ಜೊತೆಗೆ ಹಾಕಿ ಇಂಡಿಯಾಗೆ 50 ಲಕ್ಷ ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದಾರೆ.