Job Description: * ಬೆಂಗಳೂರು ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್( HAL) ಇದೀಗ ಹಿಂದೂಸ್ಥಾನ್-228 ಕಡಿಮೆ ವೇಗದ ಟ್ಯಾಕ್ಸಿ ಟ್ರಯಲ್ಸ್'ಅನ್ನು ಯಶಸ್ವಿಯಾಗಿ ನಡೆಸಿದೆ. * ಈ ಈ ಟ್ರಯಲ್ ನ್ನು ಡಿಜಿಸಿಎ ಮಾದರಿಯ ಪ್ರಮಾಣಪತ್ರಕ್ಕಾಗಿ ನಡೆಸಲಾಗಿದೆ, ಹಾಗೂ ಇದು '75' ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿದೆ, ಹಾಗೂ ಮೇಡ್ ಇನ್ ಇಂಡಿಯಾ ನಾಗರಿಕ ವಿಮಾನದ ಮಹತ್ವದ ಮೈಲಿಗಲ್ಲಾಗಿದೆ ಎಂದು HAL ನ ಅಧಿಕಾರಿ ಸಜಲ್ ಪ್ರಕಾಶ್ ತಿಳಿಸಿದ್ದಾರೆ. * ಪ್ರಸ್ತುತ ರಾಜ್ಯ ಹಾಗೂ ಅಂತಾರಾಜ್ಯಗಳ ಸಂಚಾರಕ್ಕಾಗಿ ಸರ್ಕಾರಗಳು ಮತ್ತು ಸಿವಿಲ್ ಆಪರೇಟರ್'ಗಳಿಗೆ ಈ ಟಾಕ್ಸಿ ವಿಮಾನ ಉಪಯೋಗವಾಗಲಿದೆ ಎಂದು HAL ತಿಳಿಸಿದೆ. * HAL ನ ಹಿಂದೂಸ್ಥಾನ್-228 ಟಾಕ್ಸಿ ವಿಮಾನವು 19 ಸೀಟ್ ಒಳಗೊಂಡ ಬಹು ಉಪಯೋಗಿ VIP ಸಾರಿಗೆಯಾಗಿದೆ, ಏರ್ ಆಂಬುಲೆನ್ಸ್, ವೈಮಾನಿಕ ಸಮೀಕ್ಷೆ, ಮೋಡ ಬಿತ್ತನೆ ಹೀಗೆ ಹಲವು ಚಟುವಟಿಕೆಗಳಿಗೆ ಈ ಟಾಕ್ಸಿ ವಿಮಾನ ಬಳಸಬಹುದಾಗಿದೆ ಎಂದು HAL ತಿಳಿಸಿದೆ.