Job Description: * ಇತ್ತೀಚಿಗೆ ಹೈಟಿ ದೇಶದಲ್ಲಿ ತೀವ್ರ ಭೂಕಂಪನ ಸಂಭವಿಸಿದೆ, ಆ ಸಂಧರ್ಭದಲ್ಲಿ ಸುಮಾರು 1,297 ಜನರು ಸಾವನ್ನಪಿದ್ದಾರೆ, ಹಾಗೂ 5,700 ಜನರು ಗಾಯಗೊಂಡಿದ್ದಾರೆ ಎಂದು ಹೈಟಿ ತಿಳಿಸಿದೆ. * ಹೈಟಿ ರಾಜಧಾನಿ ಪೋರ್ಟ್ -ಹೌ-ಪ್ರಿನ್ಸ್ ಪಶ್ಚಿಮಕ್ಕೆ 125 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರವಿದೆ. * ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.2 ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಈ ಮಾಹಿತಿಯ ಪ್ರಕಾರ ಅಂದಾಜು 7000 ಮನೆಗಳು ಕುಸಿದಿವೆ. 5000 ಕ್ಕೂ ಅಧಿಕ ಮನೆಗಳು ಹಾಳಾಗಿವೆ ಎಂದು ತಿಳಿಸಿದ್ದಾರೆ. * ದ್ವೀಪರಾಷ್ಟ್ರ ಹೈಟಿಯಲ್ಲಿ ಈ ಹಿಂದೆ ಜುಲೈ 7 ರಂದು ಅಧ್ಯಕ್ಷ ಜೊವೆನಿಲ್ ಮೊಯ್ಸ್ ಅವರ ಹತ್ಯೆಯಾಗಿತ್ತು, ಕೋವಿಡ್-19 ರೋಗದಿಂದ ಈ ದೇಶ ನಲುಗಿಹೋಗಿತ್ತು, ಇದೀಗ ಭೂಕಂಪನ ಇದರಿಂದಾಗಿ ದೇಶದ ಸಮಸ್ಯೆಯ ಇನ್ನು ಹೆಚ್ಚಾಗಿದೆ. * ಈ ಹಿಂದೆ 2010 ರಲ್ಲಿ ಹೈಟಿ ರಾಷ್ಟ್ರದಲ್ಲಿ ಭೂಕಂಪನ ಸಂಭವಿಸಿ ಆ ಸಮಯದಲ್ಲಿಯೂ ಕೂಡ ಸಾವಿರ ಜನರು ಮೃತಪಟ್ಟಿದ್ದರು.