Job Description: * ಪ್ರಸ್ತುತ ಅಪರೂಪದ ಆರ್ಕಿಡ್ ಉತ್ತರಾಖಂಡ ರಾಜ್ಯದ ಚಮೊಲಿ ಜಿಲ್ಲೆಯ ಮಂಡಲ್ ಪ್ರದೇಶದ ಬೆಟ್ಟದಲ್ಲಿ ಪತ್ತೆಯಾಗಿದೆ. * ಈ ಆರ್ಕಿಡ್ ಕ್ಕೆ ಸೆಫ್ಲಾಂಥೆರಾ ಎರೆಕ್ಟಾ ವೆರೈಟಿಯ ಒಬ್ಲಾಂಸಿಒಲಟಾ ಎಂದು ಹೆಸರಿಸಲಾಗಿದೆ, ಇದು ಸುಮಾರು 1870 ಮೀ. ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುಖ್ಯ ಅರಣ್ಯ ಅಧಿಕಾರಿ ಸಂಚೀವ್ ಚತುರ್ವೇದಿ ಅವರು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಭಾರತದ ಸಸ್ಯ ವರ್ಗದಲ್ಲಿ ಇದು ಹೊಸ ದಾಖಲೆಯಾಗಿದೆ ಎಂದಿದ್ದಾರೆ. * ಈ ಹೊಸ ತಳಿಯ ಆರ್ಕಿಡ್ ವನ್ನು ಭಾರತೀಯ ಸಸ್ಯ ಶಾಸ್ತ್ರೀಯ ಸಮೀಕ್ಷಾ ತಂಡವು ಈ ವಿಷಯವನ್ನು ಖಚಿತಪಡಿಸಿದೆ, ಅಲ್ಲದೇ ಈ ತಳಿಯನ್ನು ಇದೇ ಮೊದಲ ಬಾರಿಗೆ ದಾಖಲಿಸಲಾಗಿದೆ ಎಂದಿದ್ದಾರೆ.