Job Description: * ತಮಿಳುನಾಡು ರಾಜ್ಯವು 2021-22 ರ ಆರ್ಥಿಕ ವರ್ಷದಲ್ಲಿ ಪೆಟ್ರೋಲ್ ಬೆಲೆಯನ್ನು ರೂ 3/ಲೀಟರ್ ಕಡಿತಗೊಳಿಸಿದೆ, ಇದರಿಂದಾಗಿ ಗ್ರಾಹಕರಿಗೆ ಪರಿಹಾರವನ್ನು ನೀಡಿದಂತಾಗುತ್ತದೆ ಎಂದು ತಿಳಿಸಿದೆ, ಪೆಟ್ರೋಲ್ ಬೆಲೆ ಕಡಿತಗೊಳಿಸಿದ ಭಾರತದ ಮೊದಲ ರಾಜ್ಯ ಇದಾಗಿದೆ. * ತಮಿಳನಾಡು ರಾಜ್ಯದ ರಾಜ್ಯ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಆಗಸ್ಟ್ 13 ರಂದು ತಮ್ಮ ಬಜೆಟ್ ಭಾಷಣದಲ್ಲಿ ಬೆಲೆ ಕಡಿತವನ್ನು ಘೋಷಣೆ ಮಾಡಿದ್ದಾರೆ, ಹಾಗೂ ಇದು ಆಗಸ್ಟ್. 14 ರಿಂದ ಜಾರಿಗೆ ಬಂದಿದೆ. * ತಮಿಳನಾಡು ರಾಜ್ಯದ ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಅಂದಾಜು 1,160 ಕೋಟಿ ರೂ. ಆದಾಯ ನಷ್ಟವಾಗುವ ನಿರೀಕ್ಷೆಯಿದೆ. * ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್'ನ್ನು ಜಿಎಸ್ಟಿ GST ವ್ಯಾಪ್ತಿಯಿಂದ ಹೊರಗಿಡಲಾಗಿದೆ.