Job Description: * ಪ್ರಸ್ತುತ ಭಾರತೀಯ ಮಹಿಳಾ ಫುಟ್ಬಾಲ್ ತಂಡದ ಮುಖ್ಯ ಕೋಚ್ ಆಗಿ ಥಾಮಸ್ ಡೆನ್ನರ್ಬಿ ಅವರು ಅತೀ ಶೀಘ್ರವೇ ಅಧಿಕಾರವನ್ನು ಸ್ವೀಕಾರ ಮಾಡಲಿದ್ದಾರೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ. * ಸ್ವೀಡನ್ ದೇಶದ ಥಾಮಸ್ ಡೆನ್ನರ್ಬಿ ಅವರು ಈ ಮೊದಲು ಭಾರತದ 17 ವರ್ಷದೊಳಗಿನ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದರು. * ಪ್ರಸ್ತುತ 2022 ರಲ್ಲಿ ಭಾರತದಲ್ಲೇ ನಡೆಯುವ ಎಎಫ್ಸಿ ಏಷ್ಯಾಕಪ್ ಟೂರ್ನಿಯ ಮಹಿಳಾ ಸೀನಿಯರ್ ತಂಡಕ್ಕೆ ಇವರ ಕೋಚ್ ಲಭಿಸಲಿದೆ. * ಸ್ವೀಡನ್ ಮಹಿಳಾ ತಂಡವು ಥಾಮಸ್ ಅವರ ಮಾರ್ಗದರ್ಶನದಲ್ಲಿ 2011 ರ ವಿಶ್ವಕಪ್ನಲ್ಲಿ 3ನೇ ಸ್ಥಾನ ಪಡೆದಿದೆ, ಅಲ್ಲದೇ 2012 ರ ಲಂಡನ್ ಒಲಿಂಪಿಕ್ಸ್ನಲ್ಲಿ ಸ್ವೀಡನ್ ಮಹಿಳಾ ತಂಡವು ಕ್ವಾರ್ಟರ್ಫೈನಲ್ ಹಂತವನ್ನು ತಲುಪಿತ್ತು.