Job Description: * ದೇಶದ ಮೊದಲ ಟ್ರಾನ್ಸಜೆಂಡರ್ ಕ್ಲಿನಿಕ್ ನ್ನು ತೆಲಂಗಾಣ ರಾಜ್ಯದ ಹೈದರಾಬಾದ್ನಲ್ಲಿ ಮೊದಲ '2' ಟ್ರಾನ್ಸ್ಜೆಂಡರ್ ಕ್ಲಿನಿಕ್ಗಳನ್ನು ಪ್ರಾಂಭಿಸಿದೆ. * ಈ ಟ್ರಾನ್ಸಜೆಂಡರ್ ಕ್ಲಿನಿಕ್ ಗಳ ಯೋಜನೆ ಕಡ್ಡಾಯ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಕಾಯಿದೆ 2019 ರ ಕೇಂದ್ರ ಸರ್ಕಾರದ ಯೋಜನೆಗಳ ಭಾಗವಾಗಿದೆ. * ಪ್ರಸ್ತುತ ಹೈದರಾಬಾದ್ನಲ್ಲಿ ಟ್ರಾನ್ಸ್ಜೆಂಡರ್ಗಳಲ್ಲಿ HIV ಪ್ರಕರಣಗಳು ಹೆಚ್ಚಾಗಿವೆ ಈ ಕಾರಣದಿಂದ ನಗರವನ್ನು ಆರಂಭದ ಸ್ಥಳವಾಗಿ ಆಯ್ಕೆ ಮಾಡಿದ್ದಾರೆ. * ಭಾರತ ದೇಶವು ಅಮೇರಿಕಾ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ನ, ಹಾಗೂ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ, ಅಲ್ಲದೇ 2030 ರ ಸಮಯಕ್ಕೆ ಏಡ್ಸ್ ನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. * ಈ ಕ್ಲಿನಿಕ್ ನ್ನು ಸಂಪೂರ್ಣವಾಗಿ ಟ್ರಾನ್ಸ್-ಜೆಂಡರ್ ಗಳ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ, ಹಾಗೂ ಕ್ಲಿನಿಕ್ ಆರೋಗ್ಯ ಸೇವೆಗಳು, ಹಾರ್ಮೋನ್ ಥೆರಪಿ ಹಾಗೂ ಲಿಂಗ ದೃಢೀಕರಣ ಪ್ರಕ್ರಿಯೆಗಳ ಮಾರ್ಗದರ್ಶನದ ಮಾಹಿತಿಯ ಜೊತೆಗೆ ಔಷಧಿಗಳನ್ನು ನೀಡುತ್ತದೆ.