Job Description: * ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉಜ್ವಲ ಎಂಬ ಉಚಿತ ಎಲ್ಪಿಜಿ(LPG) ಸಂಪರ್ಕ ಯೋಜನೆಯ 2 ನೇ ಆವೃತ್ತಿಯನ್ನು ಉತ್ತರ ಪ್ರದೇಶ ರಾಜ್ಯದಿಂದ ಆಗಸ್ಟ್. 10ರಂದು ಆರಂಭಿಸಲಿದ್ದಾರೆ. * ಈ 2016 ರಲ್ಲಿ ಉತ್ತರ ಪ್ರದೇಶ ರಾಜ್ಯದಿಂದ ಈ ಉಜ್ವಲ ಯೋಜನೆಯ ಮೊದಲ ಆವೃತ್ತಿಯನ್ನು ಪ್ರಾರಂಭಿಸಿದ್ದರು. * ಪ್ರಧಾನಮಂತ್ರಿ ಮೋದಿಯವರು ಉತ್ತರ ಪ್ರದೇಶ ರಾಜ್ಯದ ಮಹೋಬಾ ಜಿಲ್ಲೆಯಿಂದ ವರ್ಚುವಲ್ ಸಭೆಯ ಮೂಲಕ '1' ಕೋಟಿ ಅಧಿಕ LPG ಸಂಪರ್ಕವನ್ನು ನೀಡುವ ಮೂಲಕ ಉಜ್ವಲ -2 ಯೋಜನೆಯನ್ನು ಆರಂಭಿಸಲಿದ್ದಾರೆ. * ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ ಈ ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಯೋಜನೆಯನ್ನು ಪ್ರಾರಂಭಿಸಿದ್ದಾರೆ. * 2020 ರ ವೇಳೆಗೆ ಸುಮಾರು '8' ಕೋಟಿ ಮಹಿಳೆಯರಿಗೆ LPG ಸಂಪರ್ಕಗಳನ್ನು ನೀಡಲು ನಿರ್ಧರಿಸಿತ್ತು, ಆದರೆ 2019 ರ ಸೆಪ್ಟೆಂಬರ್ ವೇಳೆಗೆ '8' ಕೋಟಿ ಮಹಿಳೆಯರಿಗೆ LPG ಸಂಪರ್ಕಗಳನ್ನು ನೀಡಿ ಗುರಿ ಸಾಧಿಸಿದೆ.