Job Description: * ಅರ್ಜೆಂಟೀನಾದ ಹಿರಿಯ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಬಾರ್ಸಿಲೋನಾ ಎಫ್ಸಿ (ಫುಟ್ಬಾಲ್ ಕ್ಲಬ್) ತಂಡಕ್ಕೆ ವಿದಾಯವನ್ನು ಘೋಷಿಸಿದ್ದಾರೆ. * 34 ವರ್ಷ ವಯಸ್ಸಿನ ಲಿಯೊನೆಲ್ ಮೆಸ್ಸಿ, ಸುಮಾರು 21 ವರ್ಷಗಳಿಂದ ಬಾರ್ಸಿಲೋನಾ ತಂಡದಲ್ಲಿ ಆಟವಾಡುತ್ತಿದ್ದರು, ಹಾಗೂ 682 ಗೋಲುಗಳ ದಾಖಲೆಯನ್ನು ನಿರ್ಮಿಸಿದ್ದಾರೆ. * ಮೆಸ್ಸಿ ಅವರು ಬಾರ್ಸಿಲೋನಾ ಕ್ಲಬ್ನೊಂದಿಗೆ 778 ಪಂದ್ಯಗಳಲ್ಲಿ ಆಟವಾಡಿದ್ದಾರೆ, ಸ್ಪೇನೀಶ್ ಲೀಗ್ 520 ಪಂದ್ಯಗಳಲಿ ಆಟವಾಡಿ ಒಟ್ಟು 474 ಗೋಲುಗಳನ್ನು ಗಳಿಸಿದ್ದರು. * ಲಿಯೊನೆಲ್ ಮೆಸ್ಸಿ ಅವರು ಸುಮಾರು 2 ದಶಕಗಳನ್ನು ಬಾರ್ಸಿಲೋನ ಕ್ಲಬ್ನೊಂದಿಗೆ ಕಳೆದಿದ್ದಾರೆ, ಇವರು 2004 ರಲ್ಲಿ ಮೊದಲ ಪಂದ್ಯವನ್ನು ಆಡಿದ್ದಾರೆ. * ಬಾರ್ಸಿಲೋನ ಕ್ಲಬ್ನೊಂದಿಗೆ 17 ವರ್ಷಗಳ ಕಾಲ ಆಟವಾಡಿದ್ದಾರೆ, 4 ಬಾರಿ ಚಾಂಪಿಯನ್ಸ್ ಲೀಗ್ , 10 ಬಾರಿ ಸ್ಪೇನೀಶ್ ಲೀಗ್, 7 ಬಾರಿ ಕೋಪಾ ಡೆಲ್ ರೇ ಮತ್ತು 8 ಬಾರಿ ಸ್ಪೇನೀಶ್ ಸೂಪರ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.