Job Description: * ಈ ಬಾರಿಯ ಟೋಕಿಯೊ ಒಲಿಂಪಿಕ್ಸ್ ನ ಪುರುಷರ 4x100 ಮೀಟರ್ಸ್ ರಿಲೇಯ ಅಂತಿಮ ಲ್ಯಾಪ್ನಲ್ಲಿ ಫಿಲಿಪ್ಪೊ ತೊರ್ಟು ಅವರು ಇಟಲಿಗೆ ಚಿನ್ನದ ಪದಕ ಗೆದ್ದು ನೀಡಿದರು. - ಬ್ರಿಟನ್ ಬೆಳ್ಳಿ ಪದಕವನ್ನು ಜಯಿಸಿದೆ. - ಕೆನಡಾ ಕಂಚಿನ ಪದಕವನ್ನು ಜಯಿಸಿದೆ. * ಮಹಿಳಾವಿಭಾಗದ 4x100 ಮೀಟರ್ಸ್ ರಿಲೆಯಲ್ಲಿ ಚಿನ್ನದ ಪದಕವನ್ನು ಜಮೈಕಾ ದೇಶ ಜಯಿಸಿದೆ. - ಅಮೆರಿಕ ದೇಶವು ಬೆಳ್ಳಿ ಪದಕವನ್ನು ಜಯಿಸಿದೆ. - ಬ್ರಿಟನ್ ದೇಶವು ಕಂಚಿನ ಪದಕವನ್ನು ಜಯಿಸಿದೆ. * ಮಹಿಳಾ ವಿಭಾಗದ 1500 ಮೀ. ಓಟದಲ್ಲಿ ಕೆನ್ಯಾದ ಫೇತ್ ಕಿಪ್ಪೆಗನ್ ಅವರು ಚಿನ್ನವನ್ನು ಜಯಿಸಿದ್ದಾರೆ. - ಬ್ರಿಟನ್ನ ಲಾರಾ ಮುಯಿರ್ ಅವರು ಬೆಳ್ಳಿ ಜಯಿಸಿದ್ದಾರೆ. - ನೆದರ್ಲೆಂಡ್ಸ್ನ ಸಿಫಾನ್ ಹಸನ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ. * ಮಹಿಳಾ ವಿಭಾಗದ 400 ಮೀ. ಓಟದಲ್ಲಿ ಬಹಾಮದ ಶಾನೆ ಮಿಲ್ಲರ್ ಅವರು ಚಿನ್ನವನ್ನು ಜಯಿಸಿದ್ದಾರೆ. - ಡೊಮಿನಿಕಾ ರಿಪಬ್ಲಿಕ್ನ ಮರಿಲೀಡಿ ಪೌಲಿನೊ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. - ಅಮೆರಿಕದ ಅಲಿಸನ್ ಫೆಲಿಕ್ಸ್ ಕಂಚಿನ ಪದಕವನ್ನು ಜಯಿಸಿದ್ದಾರೆ.