Job Description: * ಕೇಂದ್ರ ಸರ್ಕಾರವು ಕೋವಿಡ್ -19 ಲಸಿಕೆಗಳನ್ನು '2' ಡೋಸ್ ಪಡೆದ ಜನರು ರಾಜ್ಯಾದ್ಯಂತ ಸಂಚರಿಸಲು ಆರ್ಟಿ-ಪಿಸಿಆರ್ ವರದಿ ಕಡ್ಡಾಯವಲ್ಲಎಂದು ಅಧಿಸೂಚನೆಯನ್ನು ಹೊರಡಿಸಿದೆ. * ರಾಷ್ಟ್ರೀಯ ಇಮ್ಯೂನೈಸೇಶನ್ ಆನ್ ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ (NTAGI) ಪ್ರಕಾರ ಒಬ್ಬ ವ್ಯಕ್ತಿಗೆ ಸಂಪೂರ್ಣ ಲಸಿಕೆ ಹಾಕಿದ್ದರೆ, ಅವರ ಪ್ರಯಾಣಕ್ಕಾಗಿ RT-PCR ಪರೀಕ್ಷಾ ವರದಿ ಅಗತ್ಯವಿಲ್ಲ ಎಂದು ತಿಳಿಸಿದೆ. * ತಮಿಳುನಾಡು ಸರ್ಕಾರವು ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಹಾಗೂ ಕೇರಳದಿಂದ ರಾಜ್ಯಕ್ಕೆ ಬರುವ ಜನರಿಗೆ ಸಂಪೂರ್ಣ ಕೋವಿಡ್ -19 ಲಸಿಕೆ (ಎರಡು ಡೋಸ್ಗಳೊಂದಿಗೆ)ಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿದೆ. * ಪ್ರಸ್ತುತ ಕರ್ನಾಟಕ ರಾಜ್ಯವು ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಬರುವ ಜನರಿಗೆ RT-PCR ನೆಗೆಟಿವ್ ವರದಿಗಳನ್ನು ಕಡ್ಡಾಯಗೊಳಿಸಿದೆ.