Job Description: * ಲಡಾಖ್ನ ಕಾರ್ಗಿಲ್ ಜಿಲ್ಲೆಯ ಆರ್ಯನ್ ವ್ಯಾಲಿಯಲ್ಲಿ 40 ಕಿಲೋಮೀಟರ್ ಟ್ರಾನ್ಸ್ಮಿಷನ್ ಲೈನ್ ನ್ನು ಯಶಸ್ವಿಯಾಗಿ ನಿಯೋಜಿಸಿದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ. * ಲಾಲೂಂಗ್, ಡಾರ್ಚಿಕ್, ಸಿಲ್ಮೂ, ಬಟಾಲಿಕ್, ಸಿನಿಕ್ಸೆ, ಹರ್ದಾಸ್, ಗಾರ್ಕಾನ್ ಮತ್ತು ಲಾಲೂಂಗ್ ನಿಂದ ಡಾರ್ಚಿಕ್ ನಡುವಿನ ಸುತ್ತಮುತ್ತಲಿನ ಗ್ರಾಮಗಳನ್ನು ಪ್ರಧಾನ ಮಂತ್ರಿಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಪವರ್ ಗ್ರಿಡ್ ಸಂಪರ್ಕಿಸಲಾಗಿದೆ. * ಪ್ರಸ್ತುತ ಕಾರ್ಗಿಲ್ ಜಿಲ್ಲೆಯ ಆರ್ಯನ್ ವ್ಯಾಲಿಯ ಎಲ್ಲಾ ಗ್ರಾಮಗಳು ಇದೀಗ 220 KV ಶ್ರೀನಗರ-ಲೇಹ್ ಪ್ರಸರಣ ಮಾರ್ಗಗಳ ಮೂಲಕ ನ್ಯಾಷನಲ್ ಗ್ರಿಡ್ಗೆ ಸಂಪರ್ಕ ಹೊಂದಿಕೊಂಡಿವೆ, ಹಾಗೂ ಲೇಹ್ ಜಿಲ್ಲೆಯ ನುಬ್ರಾ ಕಣಿವೆಯ ಲಾರ್ಜಿಯಾಬ್ ನಂತಹ ಇತರ 20 ಹಳ್ಳಿಗಳ ವಿದ್ಯುದ್ದೀಕರಣವನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಪೂರ್ಣಗೊಳಿಸಿದೆ. * ಪವರ್ ಗ್ರಿಡ್ ಸಂಪರ್ಕದಿಂದ ಲಡಾಖ್ ಪ್ರದೇಶದ ದೂರದ ಹಳ್ಳಿಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದೆ. * ನ್ಯಾಷನಲ್ ಗ್ರಿಡ್ ಎನ್ನುವದು ಭಾರತದಲ್ಲಿನ ಅಧಿಕ ವೋಲ್ಟೇಜ್ ವಿದ್ಯುತ್ ಪ್ರಸರಣ ಜಾಲವಾಗಿದೆ. * ಪ್ರಸ್ತುತ ಭಾರತದಲ್ಲಿ ನ್ಯಾಷನಲ್ ಗ್ರಿಡ್'ನ್ನು ಸರ್ಕಾರಿ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾವನ್ನು ಸರ್ಕಾರಿ ಸ್ವಾಮ್ಯದ ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಕಾರ್ಯ ನಿರ್ವಹಿಸುತ್ತದೆ.