Job Description: * ಪ್ರಸ್ತುತ ದೆಹಲಿ ಕ್ಯಾಬಿನೆಟ್ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಹಾಗೂ ಖಾಸಗಿ ವಲಯಗಳಿಗೆ ಆಮ್ಲಜನಕ ಟ್ಯಾಂಕರ್ಗಳಲ್ಲಿ ಹೂಡಿಕೆ ಮಾಡಲು ಹಾಗೂ ವೈದ್ಯಕೀಯ ಆಮ್ಲಜನಕಕ್ಕಾಗಿ ಶೇಖರಣಾ ಸೌಲಭ್ಯಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹ ನೀಡುವ ನೀತಿಗೆ ಅನುಮೋದನೆಯನ್ನು ನೀಡಿದೆ. * ದೆಹಲಿ ಸರ್ಕಾರವು ಕೋವಿಡ್ -19 2 ನೇ ಅಲೆಯನ್ನು ನಿರ್ವಹಿಸುವಲ್ಲಿ ದೊಡ್ಡ ಸವಾಲನ್ನು ಎದುರಿಸಿದ, ಇದೀಗ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ನೀತಿಗೆ ಅನುಮೋದನೆ ನೀಡಿದೆ. * ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು 160 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಶನ್ ಆಮ್ಲಜನಕದ ಸ್ಥಾವರಗಳ ಪ್ರಗತಿಯನ್ನು ಪರಿಶೀಲಿಸಿದ್ದಾರೆ, ಇದೀಗ ಈ ಆಮ್ಲಜನಕದ ಘಟಕಗಳನ್ನು ದೆಹಲಿಯ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. * ಈ 160 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಶನ್ (PSA)ಗಳಿಂದ ಒಟ್ಟಾರೆಯಾಗಿ ಪ್ರತಿ ದಿನಕ್ಕೆ ಸುಮಾರು 148 MT ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡಬಹುದು ಎಂದು ತಿಳಿಸಿದ್ದಾರೆ.