Job Description: * ಇಟಲಿಯ ರೋಮ್ನಲ್ಲಿ ಮೊದಲ G-20 ಸಂಸ್ಕೃತಿ ಮಂತ್ರಿಗಳ ಸಭೆಯು ಇದೇ ಜುಲೈ. 29 ಮತ್ತು 30 ರಂದು ನಡೆದಿದೆ, ಪ್ರಸ್ತುತ ಇದು ಇಟಲಿಯ G-20 ಅಧ್ಯಕ್ಷತೆಯಲ್ಲಿ ಜರುಗಿದ ಎರಡು ದಿನಗಳ ಪ್ರಮುಖ ಕಾರ್ಯಕ್ರಮ ಇದಾಗಿತ್ತು. * ರೋಮ್ನಲ್ಲಿ ಈ G-20 ಸಂಸ್ಕೃತಿ ಮಂತ್ರಿಗಳ ಶೃಂಗಸಭೆಯನ್ನು ಕೊಲೊಸಿಯಮ್ ಹಾಗೂ ಪ್ಲಝ್ವ್ ಬಾರ್ಬೆರಿನಿ ಅವರು ಆಯೋಜಿಸಿದ್ದರು. * ವಿಶ್ವದ 20 ದೊಡ್ಡ ಆರ್ಥಿಕತೆಗಳ ಸಂಸ್ಕೃತಿ ಮಂತ್ರಿಗಳು ಹಾಗೂ 40 ಉನ್ನತ ಮಟ್ಟದ ಸಾಂಸ್ಕೃತಿಕ ನಿಯೋಗಗಳು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದವು. * ಈ ಶೃಂಗಸಭೆಯಲ್ಲಿ ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಸಂಸ್ಕೃತಿ ಸಚಿವ ಡರಿಯೋ ಫ್ರಾನ್ಸೆಸ್ಚಿನಿ ಹಾಗೂ ಯುನೆಸ್ಕೋ ಮಹಾನಿರ್ದೇಶಕ ಆಡ್ರೆ ಅಜೌಲೆ ಪಾಲ್ಗೊಂಡಿದ್ದರು.