Job Description: * ಭಾರತ ದೇಶವು ಆಗಸ್ಟ್ 1 ರಿಂದ ಒಂದು ತಿಂಗಳ ಅವಧಿಯ ತನಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಳ್ಳಲಿದೆ. * ಸದ್ಯದಲ್ಲೇ ಭಾರತ ದೇಶವು ತನ್ನ 75 ನೇ ಸ್ವಾತಂತ್ರ್ಯೋತ್ಸವದ ದಿನವನ್ನು ಆಚರಿಸುವ ಸಂದರ್ಭದಲ್ಲೇ ಈ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಲು ಅವಕಾಶ ಲಭಿಸಿದೆ ಎಂಬ ವಿಷಯದ ಮಾಹಿತಿಯನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ವರ್ಚುಲ್ ಸಂದೇಶದ ಮೂಲಕ ತಿಳಿಸಿದ್ದಾರೆ. * 'ಈ ಒಂದು ತಿಂಗಳ ಅವಧಿಯ ಕಾಲಾವಕಾಶದಲ್ಲಿ '3' ಪ್ರಮುಖ ವಿಷಯಗಳಾಗಿರುವ ಕಡಲ ಭದ್ರತೆ, ಶಾಂತಿ ಪಾಲನೆ ಹಾಗೂ ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧ ಪಟ್ಟಿರುವ ಕಾರ್ಯಕ್ರಮಗಳನ್ನು ಆಯೋಜಿಸಲು ಭಾರತ ತಯಾರಿ ನಡೆಸುತ್ತಿದೆ ಎಂದು ತಿರುಮೂರ್ತಿ ಅವರು ಮಾಹಿತಿ ನೀಡಿದ್ದಾರೆ. * ಪ್ರಸ್ತುತ 2021 ರ ಜನೇವರಿ. 1 ರಂದು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯತ್ವ ಎರಡು ವರ್ಷಗಳ ಅಧಿಕಾರಾವಧಿಯುನ್ನು ಪ್ರಾರಂಭಿಸಿದೆ. * ಭಾರತವು ಮೊದಲ ಬಾರಿ 2021-22 ರ ಅವಧಿಯ ಆಗಸ್ಟ್ ತಿಂಗಳಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದೆ, ಹಾಗೂ 2022 ರ ವರ್ಷದ ಡಿಸೆಂಬರ್ನಲ್ಲಿ ಮತ್ತೇ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ ಎಂದು ತಿಳಿಸಿದ್ದಾರೆ.