Job Description: * ಶ್ರೀಲಂಕಾ ದೇಶದ ಕ್ರಿಕೆಟ್ ತಂಡ ವೇಗದ ಬೌಲರ್ 33 ವರ್ಷದ ಇಸುರು ಉದಾನ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯವನ್ನು ಹೇಳಿದ್ದಾರೆ. * ಇಸುರು ಉದಾನ ಅವರು ಇಲ್ಲಿಯತನಕ 21 ಏಕದಿನ ಪಂದ್ಯ, ಹಾಗೂ 34 ಟಿ20 ಪಂದ್ಯಗಳನ್ನೂ ಶ್ರೀಲಂಕಾ ತಂಡದ ಪರವಾಗಿ ಆಟವಾಡಿದ್ದಾರೆ. * ಇಸುರು ಉದಾನ ಅವರು ಸ್ವಿಂಗ್ ಮತ್ತು ಸ್ಲೋವರ್ ಎಸೆತಗಳಿಗೆ ಹೆಸರುವಾಸಿಯಾಗಿದ್ದರು. * 2009 ರ ಟಿ20 ವಿಶ್ವಕಪ್'ನ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಇಸುರು ಉದಾನ ಅವರು ಆಯ್ಕೆಯಾಗಿದ್ದರು. ನಂತರ 2018 ರಲ್ಲಿ ಉದಾನ ಅವರು ಮತ್ತೇ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದರು. * ಇಸುರು ಉದಾನ ಅವರು IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ 10 ಪಂದ್ಯಗಳಲ್ಲಿ ಆಟವಾಡಿದ್ದರು.