Job Description: * ಪ್ರಸ್ತುತ ಜಮೈಕ ದೇಶದ ಅಥ್ಲೀಟ್ಗಳು ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಮೂರೂ ಪದಕಗಳನ್ನು ಇವರೇ ಪಡೆದುಕೊಂಡಿದ್ದಾರೆ. - ಎಲೈನ್ ಥಾಮ್ಸನ್ ಹೆರಾ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ. - ಶೆಲ್ಲಿ ಆಯನ್ ಫ್ರೇಸರ್ ಪ್ರೈಸ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. - ಶೆರಿಕಾ ಜಾನ್ಸನ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ವಿಶ್ವ ಕಂಡ 2 ನೇ ಅತಿ ವೇಗದ ಮಹಿಳೆ ಎಂಬ ದಾಖಲೆಗೆ ಎಲೈನ್ ಥಾಮ್ಸನ್ ಅವರು ಪಾತ್ರರಾಗಿದ್ದಾರೆ, ಹಾಗೂ ಅಮೇರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅತಿವೇಗದ ಮಹಿಳೆ ಎಂಬ ದಾಖಲೆಯ ಪಟ್ಟವನ್ನು ಹೊಂದಿದ್ದಾರೆ, ಈ ಹಿಂದೆ 1988 ರಲ್ಲಿ ಇಂಡಿಯಾನಪೊಲಿಸ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಅಮೇರಿಕದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಕೇವಲ 10.49 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.