Job Description: * ಚಂಡೀಗಡ ನಗರದ ಮಹಿಳೆ ಶತಾಯುಷಿ ಅಥ್ಲೀಟ್ ಮಾನ್ ಕೌರ್ ಅವರು ತಮ್ಮ 105 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಮಾನ್ ಕೌರ್ ಅವರು 1916 ರಲ್ಲಿ ಜನಿಸಿದರು, ಮಾನ್ ಕೌರ್ ಅವರು ತಮ್ಮ ಮೊದಲನೇ ಮಗನಾದ ಗುರುದೇವ್ ಅವರು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಕಂಡು ತಾವು ಕೂಡ ತಮ್ಮ 93ನೇ ವಯಸ್ಸಿನಲ್ಲಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. * ಈ ಹಿಂದೆ 2007 ರಲ್ಲಿ ಚಂಡೀಗಡದಲ್ಲಿ ನಡೆದಿರುವ ಹಿರಿಯರ ಅಥ್ಲೆಟಿಕ್ಸ್ ಕೂಟದಲ್ಲಿ ಮೊದಲ ಪದಕವನ್ನು ಮಾನ್ ಕೌರ್ ಅವರು ಜಯಿಸಿದ್ದರು. * ಮತ್ತೇ 2017 ರಲ್ಲಿ ನಡೆದಿರುವ ನ್ಯೂಜಿಲೆಂಡ್ನ ಆಕ್ಲೆಂಡ್ನ ವಿಶ್ವ ಹಿರಿಯರ ಕೂಟದ 100 ಮೀಟರ್ಸ್ ಓಟದಲ್ಲಿ ಚಿನ್ನದ ಪದಕವನ್ನು ಜಯಿಸಿ ಯುವ ಕ್ರೀಡಾ ಪ್ರತಿಭೆಗಳಿಗೆ ಮಾರ್ಗದರ್ಶನವಾಗಿದ್ದರು. * ಪೋಲೆಂಡ್ನಲ್ಲಿ ನಡೆದಿರುವ ವಿಶ್ವ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗಗಳಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.