Job Description: * ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ಅವರು ಒಟ್ಟಾರೆ '7' ಪದಕಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. * ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಅತೀ ಹೆಚ್ಚು ಪದಕಗಳನ್ನು ಜಯಿಸಿದ ಮಹಿಳೆಗೆ ಪಾತ್ರರಾಗಿದ್ದಾರೆ, ಇವರು ನಾಲ್ಕು ಚಿನ್ನದ ಪದಕ ಹಾಗೂ ಮೂರು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. * ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ಅವರು 4X100 ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನದ ಪದಕವನ್ನು ಪಡೆದು ವಿಶ್ವದಾಖಲೆಯನ್ನು ಬರೆದಿದ್ದಾರೆ. * ಇದಕ್ಕೂ ಮೊದಲು 1952 ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟುವಾದ ಮರಿಯ ಗೊರೊವೊವಿಸ್ಕ '7' ಪದಕಗಳನ್ನು ಜಯಿಸಿದ್ದರು. * ಈ ಹಿಂದೆ 2008 ರ ಬೀಜಿಂಗ್ ಒಲಿಂಪಿಕ್ಸ್'ನಲ್ಲಿ ಮೈಕಲ್ ಫೆಲ್ಪ್ಸ್ 8 ಪದಕಗಳನ್ನು ಜಯಿಸಿದ್ದರು.