Job Description: * ಬುಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ(BSY)ನವರು ಕರ್ನಾಟಕ ರಾಜ್ಯದ 19ನೇ ಮುಖ್ಯಮಂತ್ರಿಯಾಗಿದ್ದರು, ಇದೀಗ ಇವರು ಈ ಮುಖ್ಯಮಂತ್ರಿ ಸ್ಥಾನಕ್ಕೆ 2021ರ ಜುಲೈ. 26ರಂದು ರಾಜೀನಾಮೆಯನ್ನು ನೀಡಿದ್ದಾರೆ. * BSY ಅವರು 1943ರ ಫೆಬ್ರವರಿ. 27ರಂದು ಜನಿಸಿದ್ದಾರೆ, ಶಿಮೋಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ '8' ಬಾರಿ ಆಯ್ಕೆಯಾಗಿದ್ದಾರೆ, ಇವರನ್ನು ರಾಜಾ ಹುಲಿ ಎಂದು ಮಾಧ್ಯಮಗಳು ಹಾಗೂ ಅವರ ಅನುಯಾಯಿಗಳು ಜನಪ್ರಿಯವಾಗಿ ಕರೆಯುತ್ತಾರೆ. * BSY ಅವರು ಇಲ್ಲಿಯವರೆಗೆ ಕರ್ನಾಟಕದ ಉಸ್ತುವಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿ, ಹಾಗೂ ಇವರು ಒಟ್ಟು '4' ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ, ಇದಲ್ಲದೇ ಕರ್ನಾಟಕದ ವಿಧಾನಸಭೆಯಲ್ಲಿ '3' ಬಾರಿ ಪ್ರತಿಪಕ್ಷದ ನಾಯಕರಾಗಿಯು ಕೂಡ ಸೇವೆ ಸಲ್ಲಿಸಿದ ಏಕೈಕ ರಾಜಕಾರಣಿ ಇವರಾಗಿದ್ದಾರೆ. * ಯಡಿಯೂರಪ್ಪನವರು '4' ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು: - ಮೊದಲ ಬಾರಿ: 2007ರ ನವೆಂಬರ್ 7 ರಿಂದ 2007ರ ನವೆಂಬರ್ 10 ರವರೆಗೆ. - ಎರಡನೇ ಬಾರಿ: 2008ರ ಮೇ 30 ರಿಂದ 2011ರ ಜುಲೈ 31 ರವರೆಗೆ. - ಮೂರನೇ ಬಾರಿ: 2018ರ ಮೇ 17 ರಿಂದ 2018ರ ಮೇ 19 ರವರೆಗೆ. - ನಾಲ್ಕನೇ ಬಾರಿ: 2019ರ ಜುಲೈ 26 ರಿಂದ 2021ರ ಜುಲೈ 26 ರವರೆಗೆ. * ಯಡಿಯೂರಪ್ಪನವರ ವೈಯಕ್ತಿಕ ಜೀವನ: ಯಡಿಯೂರಪ್ಪ ಅವರು 1943ರ ಫೆಬ್ರವರಿ. 27ರಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೆಟ್ ತಾಲ್ಲೂಕಿನ ಬುಕನಕೆರೆ ಎಂಬ ಹಳ್ಳಿಯಲ್ಲಿ ಜನಿಸಿದರು, ಇವರು ಪೂರ್ವ ವಿಶ್ವವಿದ್ಯಾಲಯ ಕಾಲೇಜು ಶಿಕ್ಷಣವನ್ನು ಸರ್ಕಾರಿ ಕಾಲೇಜು, ಮಂಡ್ಯ (ಮೈಸೂರು ವಿಶ್ವವಿದ್ಯಾಲಯ) 1960–61ರಲ್ಲಿ ಪೂರ್ಣಗೊಳಿಸಿದ್ದಾರೆ. * ಯಡಿಯೂರಪ್ಪನವರು 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ವಿಭಾಗದ ಗುಮಾಸ್ತರಾಗಿ ನೇಮಕ ಮಾಡಲಾಗಿತ್ತು, ಆದರೆ ಇವರು ಈ ಕೆಲಸವನ್ನು ಬಿಟ್ಟು, ಶಿಕಾರಿಪುರಕ್ಕೆ ತೆರಳಿ ಅಲ್ಲಿ ವೀರಭದ್ರ ಶಾಸ್ತ್ರಿಗಳ ಶಂಕರ ಭತ್ತದ ಗಿರಣಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಸೇರಿಕೊಂಡರು, ನಂತರದ ದಿನಗಳಲ್ಲಿ ಅಂದರೆ 1967ರಲ್ಲಿ ಮೈತ್ರಾದೇವಿ ಅವರನ್ನು ಮದುವೆಯಾದರು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, (ರಾಘವೇಂದ್ರ, ಬಿ.ವೈ.ವಿಜೇಂದ್ರ) ಹಾಗೂ ಮೂವರು ಪುತ್ರಿಯರು (ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ) ಎಂಬುವರು ಇದು ಇವರ ವಯಕ್ತಿಕ ಜೀವನ.