Job Description: * ಪ್ರಸ್ತುತ ಜಪಾನ್ ಟೋಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ನಲ್ಲಿ ಜಪಾನ್'ನ 13 ವರ್ಷ ವಯಸ್ಸಿನ ಮೊಮಿಜಿ ನಿಶಿಯಾ ಅವರು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ, ಹಾಗೂ ಇವರು ಚಿನ್ನದ ಪದಕ ಗೆದ್ದ 2ನೇ ಅತ್ಯಂತ ಕಿರಿಯ ವ್ಯಕ್ತಿಗೆ ಪಾತ್ರರಾಗಿದ್ದಾರೆ. * ಈ ಬಾರಿ ಟೋಕಿಯೊ ಒಲಂಪಿಕ್ಸ್ನಲ್ಲಿ ಹೊಸದಾಗಿ ಪ್ರಾರಂಬಿಸಲಾಗಿರುವ ಸ್ಕೇಟ್ ಬೋರ್ಡಿಂಗ್ನಲ್ಲಿ ನಿಶಿಯಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ, ಹಾಗೂ ಇವರು ಮೊದಲ ಮಹಿಳಾ ಸ್ಕೇಟ್ ಬೋರ್ಡಿಂಗ್ ಚಾಂಪಿಯನ್ ಆಗಿದ್ದಾರೆ. * ಈ ಮೊದಲು ಚಿನ್ನದ ಪದಕವನ್ನು ಬ್ರೆಜಿಲ್'ನ ರೆಸಾ ಲೀಲ್ ಅವರು ಜಯಿಸಿದ್ದರು, ಹಾಗೂ 1936ರ ಬರ್ಲಿನ್ ಕ್ರೀಡಾಕೂಟದಲ್ಲಿ ಅಮೆರಿಕಾದ 13 ವರ್ಷದ ಡೈವರ್ ಮಾರ್ಜೋರಿ ಗೆಸ್ಟ್ರಿಂಗ್ ಅವರು ಬರ್ಲಿನ್ ಒಲಿಂಪಿಕ್'ನಲ್ಲಿ ಪದಕ ಜಯಿಸಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.