Job Description: * ಪ್ರತಿ ವರ್ಷವೂ ದೇಶದಲ್ಲಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಾಸ್ ಆಚರಿಸಲಾಗುತ್ತದೆ, ಇದು 22ನೇ ವಾರ್ಷಿಕೋತ್ಸವವಾಗಿದೆ ಈ ಸಂಧರ್ಭದಲ್ಲಿ ರಾಷ್ಟ್ರವು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತದೆ. * 1999ರಲ್ಲಿ ಈ ದಿನದಂದು ಭಾರತೀಯ ಸಶಸ್ತ್ರ ಪಡೆಗಳ ಪಾಕಿಸ್ತಾನದ ಸೈನ್ಯದ ಮೇಲೆ ಆಪರೇಷನ್ ವಿಜಯವನ್ನು ಆರಂಭಿಸಿ ಪಾಕಿಸ್ತಾನದ ಸೈನ್ಯವನ್ನು ಭಾರತದ ಕಾರ್ಗಿಲ್ ಪ್ರದೇಶದಿಂದ ಹೊರಹಾಕಲಾಯಿತು. * ಈ ಕಾರ್ಗಿಲ್ ವಿಜಯ್ ದಿವಾಸ್ ಯುದ್ಧದ ಸಂಧರ್ಭದಲ್ಲಿ ಹುತಾತ್ಮರಾಗಿರುವವರಿಗೆ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಲಡಾಖ್ನ ಡ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ಗೌರವ ಸಲ್ಲಿಸಿದರು. * 1999ರ ಮೇ. 3 ರಿಂದ ಜುಲೈ. 26 ರವರೆಗೆ ಕಾರ್ಗಿಲ್ ಯುದ್ಧವು ನಡೆದಿದೆ. * ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಮತ್ತು ನಿಯಂತ್ರಣ ರೇಖೆಯಲ್ಲಿ (LOC) ನಡೆದ ಸಶಸ್ತ್ರ ಸಂಘರ್ಷವಾಗಿದೆ.