Job Description: * ಕೇರಳ ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಅದರ ಅಂಗಸಂಸ್ಥೆ ಶಾಲಾ ಕಾಲೇಜುಗಳಲ್ಲಿ ಲಭ್ಯವಿರುವ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವ ಕೇರಳ ರಾಜ್ಯದ ಟ್ರಾನ್ಸ್ಜೆಂಡರ್ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ವಯಸ್ಸಿನ ಮಿತಿಯನ್ನು ತೆಗೆದುಹಾಕಿದ್ದಾರೆ. * ಪ್ರಸ್ತುತ ಕೇರಳ ರಾಜ್ಯದ ಟ್ರಾನ್ಸ್ಜೆಂಡರ್ ವಿದ್ಯಾರ್ಥಿಗಳನ್ನು ವಿವಿಧ ಸ್ನಾತಕೋತ್ತರ ಹಾಗೂ ಪದವಿಪೂರ್ವ ಶೈಕ್ಷಣಿಕ ವಿದ್ಯಾಭಾಸ ಮುಂದುವರಿಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವಯಸ್ಸಿನ ಮಿತಿಯನ್ನು ತೆಗೆದುಹಾಕುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. * ಕೇರಳ ರಾಜ್ಯವು ಈ ಹಿಂದೆ 2015 ರಲ್ಲಿ ಟ್ರಾನ್ಸ್ಜೆಂಡರ್ ವ್ಯಾಪ್ತಿಯನ್ನು ಘೋಷಿಸಿದ ಭಾರತದ ಮೊದಲ ರಾಜ್ಯವಾಗಿದೆ.