Job Description: * ಪ್ರಸ್ತುತ ಜಪಾನ್'ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ 4 ಹೊಸ ಕ್ರೀಡೆಗಳನ್ನು ಸೇರ್ಪಡೆಮಾಡಲಾಗುತ್ತಿದೆ. * ಪ್ರಸ್ತುತ ಜಪಾನ್ ರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಸಿದ್ಧಿಯಾಗಿರುವ ಕರಾಟೆ ಈ ಬಾರಿಯ ಒಲಿಂಪಿಕ್ಸ್ ಗೆ ಸೇರ್ಪಡೆಯಾಗುತ್ತಿದೆ, ಇದರ ಜೊತೆಯಲ್ಲಿ ಸರ್ಫಿಂಗ್, ಸ್ಕೇಟ್ ಬೋರ್ಡಿಂಗ್ ಹಾಗೂ ಸ್ಪೋರ್ಟ್ ಕ್ಲೈಂಬಿಂಗ್ ಸ್ಪರ್ಧೆಗಳನ್ನು ಪರಿಚಯಿಸಿ ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. * ಕರಾಟೆಯನ್ನು ಒಲಿಂಪಿಕ್ಸ್ ಗೆ ಸೇರಿಸಲು 1970 ರಿಂದ ಪ್ರಯತ್ನ ನಡೆಯುತ್ತಿದೆ, ಇದೀಗ ಈ ಬಾರಿಯ ಟೊಕಿಯೋ ಒಲಿಂಪಿಕ್ಸ್'ಗೆ ಸೇರ್ಪಡೆ ಮಾಡಲಾಗುತ್ತಿದೆ. * ಈ ಬಾರಿಯ ಟೊಕಿಯೋ ಒಲಿಂಪಿಕ್ಸ್'ನಲ್ಲಿ 3X3 ಬಾಸ್ಕೆಟ್ ಬಾಲ್, ಫ್ರೀ ಸ್ಟೈಲ್ ಬಿಎಂಎಕ್ಸ್, ಮ್ಯಾಡಿಸನ್ ಸೈಕ್ಲಿಂಗ್ ಸ್ಪರ್ಧೆಗಳನ್ನು ನಡೆಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.