Job Description: * ಭಾರತದಲ್ಲಿ ಮುಂಬರುವ ದಿನಗಳಲ್ಲಿ ವಿದ್ಯುತ್ ವಾಹನಗಳ ಯುಗ ಪ್ರಾರಂಭವಾಗಲಿದೆ, ಪ್ರಸ್ತುತ ದೇಶ ದಲ್ಲೇ ಅತೀ ದೊಡ್ಡದಾದ ಎಲೆಕ್ಟ್ರಿಕ್ ವಾಹನಗಳ ವಿದ್ಯುತ್ ಚಾರ್ಜಿಂಗ್ ಕೇಂದ್ರವನ್ನು ಮುಂಬಯಿ ಮೂಲದ ಮಂಗೇತಾ ಕಂಪೆನಿಯು ಮುಂಬಯಿ ನಗರದಲ್ಲಿ ಆರಂಭಿಸಿದೆ. * ಈ ವಿದ್ಯುತ್ ಚಾರ್ಜಿಂಗ್ ಕೇಂದ್ರದಲ್ಲಿ 21 ಚಾರ್ಜಿಂಗ್ ಪಾಯಿಂಟ್ಗಳು ಇವೆ, ಅವುಗಳಲ್ಲಿ 4 ಡಿ.ಸಿ. ಚಾರ್ಜರ್ಗಳಿವೆ ಇವುಗಳು ಪ್ರತಿಯೊಂದು 5 KW ನಿಂದ 50 KW ಸಾಮರ್ಥ್ಯ ಹೊಂದಿವೆ, ಇನ್ನ ಉಳಿದಿರುವ ಚಾರ್ಜಿಂಗ್ ಪಾಯಿಂಟ್ಗಳು ಎ.ಸಿ. ಚಾರ್ಜರ್ಗಳಾಗಿವೆ ಪ್ರತೀ ಚಾರ್ಜರ್ 3.5 ಕಿ.ವ್ಯಾಟ್ನಿಂದ 7.5 ಕಿ.ವ್ಯಾಟ್ ಸಾಮರ್ಥ್ಯ ಹೊಂದಿವೆ, ಪ್ರಸ್ತುತ ಒಂದು ಕಾರಿನ ಬ್ಯಾಟರಿ ಚಾರ್ಜ್ಗೆ ಒಂದು ರಾತ್ರಿ ಪೂರ್ತಿ ಬೇಕಾಗುತ್ತದೆ ಎಂದು ತಿಳಿಸಿದೆ. * ಒಂದು ವೇಳೆ ವಿದ್ಯುತ್ ಸಮಸ್ಯೆಗಳಾದರೆ ಪವರ್ ಬ್ಯಾಕ್ಅಪ್ಗಾಗಿ 40 KW ವಿದ್ಯುತ್ ಔಟ್ಪುಟ್ ನೀಡುವ ಡೀಸೆಲ್ ಜನರೇಟರ್ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. * ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ನಾಲ್ಕು ಚಕ್ರಗಳ ವಾಹನಗಳಿಗೆ ಸೂಕ್ತವೆಂದು ತಿಳಿಸಿದ್ದಾರೆ.