Job Description: * ಕರ್ನಾಟಕದ ಕೆಲ ಕ್ರೀಡಾಪಟುಗಳು ಪ್ರಸ್ತುತ ಜುಲೈ 23 ರಿಂದ ಜಪಾನ್'ನ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್ಸ್'ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. * ಪ್ರಸ್ತುತ ಕರ್ನಾಟಕ ರಾಜ್ಯದ ಕ್ರಿಡಾಪಟುಗಳು ಒಲಂಪಿಕ್ಸ್ನಲ್ಲಿ ಪಾಲ್ಗೊಂಡು ಚಿನ್ನ ಗೆದ್ದರೆ 5 ಕೋಟಿ ರೂ. ಬೆಳ್ಳಿಗೆ 3 ಕೋಟಿ ರೂ. ಕಂಚಿಗೆ 2 ಕೋಟಿ ರೂ. ನಗದು ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. * ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ನಗದು ಪ್ರೋತ್ಸಾಹವನ್ನು ಈಗಾಗಲೇ 5 ಕ್ರೀಡಾಪಟುಗಳಿಗೆ ತಲಾ ಹತ್ತು ಲಕ್ಷ ನಗದು ಪ್ರೋತ್ಸಾಹ ಧನ ನೀಡಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ಪಡೆದಿರುವ ಕಿರ್ದಪಟುಗಳು: ಈಕ್ವೆಸ್ಟ್ರಿಯನ್ ಕ್ರೀಡಾಪಟು ಪೌವಾದ್ ಮಿರ್ಜಾ, ಹಾಕಿ ಆಟಗಾರ ಎಸ್ ವಿ ಸುನೀಲ್, ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ, ಈಜುಪಟು ಶ್ರೀಹರಿ ನಟರಾಜ್, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರಿಗೆ ಕಾರನಾಟಕ ರಾಜ್ಯ ಸರ್ಕಾರವು ನಗದು ಪ್ರೋತ್ಸಾಹ ಧನ ನೀಡಿಲಾಗಿದೆ ಎಂದು ಒಲಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದೇಗೌಡ ತಿಳಿಸಿದ್ದಾರೆ.