Job Description: * ಇಸ್ರೇಲ್ ಹಾಗೂ ಯುಎಇ ಉಭಯ ದೇಶಗಳ ನಡುವೆ ಅಧಿಕೃತ ರಾಜತಾಂತ್ರಿಕ ಸಲುವಾಗಿ ಸ್ಥಾಪಿಸುವುದಾಗಿ ಘೋಷಣೆ ಮಾಡಿತ್ತು, ಯುಎಇ ತನ್ನ ರಾಯಭಾರ ಕಚೇರಿಯನ್ನು ಇಸ್ರೇಲ್ ನಲ್ಲಿ ಆರಂಭಿಸಿದೆ ಎಂದು ವರದಿಯಾಗಿದೆ. * ಇಸ್ರೇಲ್ ಗೆ ಮಾನ್ಯತೆ ನೀಡಿರುವ 3 ನೇ ಪ್ರಮುಖ ಅರಬ್ ದೇಶವಾಗಿದೆ, ಯುಎಇ ಈ ರಾಯಭಾರ ಕಚೇರಿ ಟೆಲ್ಅವೀವ್ನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡದಲ್ಲಿ ಆರಂಭಿಸಿ ಕಾರ್ಯನಿರ್ವಹಿಸಲಿದೆ. * ಈ ಹಿಂದಿನ ತಿಂಗಳಿನಲ್ಲಿ ಯುಎಇಯಲ್ಲಿ ಇಸ್ರೇಲ್ ರಾಯಭಾರ ಕಚೇರಿ ಪ್ರಾರಂಬವಾಗಿತ್ತು, ಇಸ್ರೇಲ್ ಅಧ್ಯಕ್ಷ ಇಸಾಕ್ ಹೆರ್ಝಾಗ್ ಹಾಗೂ ಯುಇಎ ರಾಯಭಾರಿ ಮುಹಮ್ಮದ್ ಅಲ್ ಖಾಜ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. * ಈ ರಾಯಭಾರ ಕಚೇರಿಯು ಉಭಯ ದೇಶಗಳ ನಡುವೆ ಅಭಿವೃದ್ಧಿಗೊಳ್ಳುತ್ತಿರುವ ಸಂಬಂಧಗಳಿಗೆ ಪ್ರಮುಖ ಹೆಜ್ಜೆಯಾಗಿದೆ, ಪ್ರಸ್ತುತ ಯುಎಇ ಮತ್ತು ಇಸ್ರೇಲ್ ಪ್ರಗತಿಶೀಲ ದೇಶಗಳಾಗಿವೆ. * ಇಸ್ರೇಲ್ ಅಧ್ಯಕ್ಷ ಹೆರ್ಝಾಗ್ ಅವರು ನೀಡಿರುವ ಮಾಹಿತಿಯ ಪ್ರಕಾರ ಯುಎಇಯೊಂದಿಗಿನ ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿವೆ, ಅಲ್ಲದೆ ಇಸ್ರೇಲ್ ರಾಷ್ಟ್ರದೊಂದಿಗೆ ಶಾಂತಿ ಬಯಸುವ ಬೇರೆ ಬೇರೆ ದೇಶಗಳಿಗೂ ರಾಯಭಾರ ಕಚೇರಿಯುನ್ನು ವಿಸ್ತರಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ.