Job Description: * ಅಸ್ಸಾಂ ರಾಜ್ಯದಲ್ಲಿ ಹಿಂದೂ, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದ ಇತರೆ ಸಮುದಾಯದವರು ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ನಿಷೇಧಿಸಲು ಅಸ್ಸಾಂನ ಬಿಜೆಪಿ ಸರ್ಕಾರವು ಮುಂದಾಗಿದೆ. * ಪ್ರಸ್ತುತ ಅಸ್ಸಾಂ ರಾಜ್ಯ ಸರ್ಕಾರವು 'ಜಾನುವಾರು ಸಂರಕ್ಷಣಾ ಕಾಯ್ದೆ 2021'ರ ಮಸೂದೆಯನ್ನು ಮಂಡನೆ ಮಾಡಿದೆ, ಈ ಮಸೂದೆಯ ಪ್ರಕಾರ ಇನ್ನು ಮುಂದೆ ದೇಗುಲ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳ ಸುತ್ತ ಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗುವದು ಎಂದು ಸರ್ಕಾರ ತಿಳಿಸಿದೆ, ಹಾಗೂ ಇದರ ಜೊತೆಯಲ್ಲಿ ಅಸ್ಸಾಂ ರಾಜ್ಯ ಸರ್ಕಾರದ ಪರವಾನಿಗೆ ಇಲ್ಲದೇ ಸುತ್ತ ಮುತ್ತಲಿನ ರಾಜ್ಯಗಳಿಂದ ಅಸ್ಸಾಂ ರಾಜ್ಯಕ್ಕೆ ಗೋಮಾಂಸ ಸಾಗಣೆಯನ್ನೂ ನಿರ್ಬಂಧಿಸಲು ಈ ಮಸೂದೆ ಅವಕಾಶ ನೀಡಲಿದೆ. * ಅಸ್ಸಾಂ ನೆರೆಯ ರಾಜ್ಯಗಳು ಮಿಜೋರಾಂ, ನಾಗಾಲ್ಯಾಂಡ್, ಮೇಘಾಲಯ. * ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಈ ಮಸೂದೆಯನ್ನು ಮಾಡಿಸಿದ್ದಾರೆ, ಈ ಮೊದಲಿನ ಹಾಲಿ 1950ರ ಕಾಯ್ದೆ ಬದಲು ಹೊಸ ಕಾಯ್ದೆ ತರುವುದು ಉದ್ದೇಶ ಇದಾಗಿದೆ ಎಂದಿದ್ದಾರೆ. * ಹಾಲಿ 1950ರ ಕಾಯ್ದೆಯಡಿಲ್ಲಿ 14 ವರ್ಷ ಮೀರಿದ ಜಾನುವಾರುಗಳ ಹತ್ಯೆಗೆ ಅವಕಾಶ ನೀಡಲಾಗಿತ್ತು, ಇನ್ನು ಮುಂದೆ ಈ ಹೊಸ ಮಸೂದೆಯನ್ನು ನಿಯಮಗಳ ಉಲ್ಲಂಘನೆ ಮಾಡಿದರೆ 3 ರಿಂದ 5 ವರ್ಷ ಜೈಲು ಶಿಕ್ಷೆ, ಹಾಗೂ 3ಲಕ್ಷ ದಿಂದ 5ಲಕ್ಷವರೆಗೆ ದಂಡ ವಿಧಿಸಲಾಗುವದು ಎಂದು ತಿಳಿಸಿದ್ದಾರೆ.