Job Description: * ಕನ್ನಡ ಸಿನಿ ರಂಗದ ನಟಿ ರಾಗಿಣಿ ದ್ವಿವೇದಿ ಅವರ ಲೋಕೋಪಕಾರಿ ಕೆಲಸಗಳಿಗಾಗಿ ಇದೀಗ ಇವರಿಗೆ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. * ಪ್ರಸ್ತುತ ಕೋವಿಡ್-19 ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ರಾಗಿಣಿ ದ್ವಿವೇದಿ ಅವರು ಸಮಾಜ ಸೇವೆಗಳಲ್ಲಿ ಅತೀ ಹೆಚ್ಚಾಗಿ ಭಾಗಿಯಾಗಿದ್ದಾರೆ, ಊಟ ವಿತರಣೆ, ಕಿಟ್ ವಿತರಣೆ, ಮಾಸ್ಕ್, ಸ್ಯಾನಿಟೈಸರ್'ಗಳನ್ನೂ ಹಂಚುವ ಕೆಲಸ ಕಾರ್ಯಗಳಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದಾರೆ, ಇವರ ಈ ಲೋಕೋಪಕಾರಿ ಕೆಲಸವನ್ನು ಗುರುತಿಸಿ ಲೆಜೆಂಡ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ. * ಪ್ರಸ್ತುತ ಲೋಕೋಪಕಾರಿ ಕೆಲಸ ಕಾರ್ಯಗಳಿಗಾಗಿ ಈ ಅವಾರ್ಡ್ ಪಡೆದ ದಕ್ಷಿಣ ಭಾರತದ ಮೊದಲ ಮಹಿಳೆ ನಾನಾಗಿದ್ದೇನೆ ಎಂದು ರಾಗಿಣಿ ದ್ವಿವೇದಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ, ಹಾಗೂ ಇದು ನನಗೆ ಅತ್ಯಂತ ಪ್ರತಿಷ್ಠಿತ ವಿಷಯವಾಗಿದೆ ಎಂದು ತಿಳಿಸಿದ್ದಾರೆ.