Job Description: * ಪ್ರಸ್ತುತ ಕ್ಯೂಬಾ ವಿಶ್ವದ ಮೊದಲ ಕಾಂಜುಗೇಟ್ ಕೋವಿಡ್ -19 ಲಸಿಕೆ ಸೊಬೆರಾನಾ 2'ನ್ನು ಅಭಿವೃದ್ಧಿಪಡಿಸಿದೆ. * ಈ ಸೊಬೆರಾನಾ 2 ಲಸಿಕೆಯ ಕೋವಿಡ್ -19 ರೋಗಲಕ್ಷಣದ ಪ್ರಕರಣಗಳ ವಿರುದ್ಧ ಶೇಕಡಾ 91 ರಷ್ಟು ಹೋರಾಡುವಲ್ಲಿ ಪರಿಣಾಮಕಾರಿಯಾಗಿದೆ. * ಕ್ಯೂಬಾ ಈ ಲಸಿಕೆಗೆ ಅನುಮೋದನೆ ಸಿಕ್ಕರೆ ಕೋವಿಡ್ -19 ವಿರುದ್ಧ ಲಸಿಕೆ ತಯಾರಿಸಿ ಉತ್ಪಾದಿಸಿದ ಮೊದಲ ಲ್ಯಾಟಿನ್ ಅಮೆರಿಕನ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಕ್ಯೂಬಾಗೆ ಸಲಲ್ಲಿದೆ. * ಸೊಬೆರಾನಾ 2 ಲಸಿಕೆಯನ್ನು 3 ಡೋಸ್ ಕಟ್ಟುಪಾಡುಗಳಲ್ಲಿ ನಿಯಮಿತವಾಗಿ ನೀಡಲಾಗುತ್ತದೆ, ಇದನ್ನು 0-28-56 ದಿನಗಳ ನಿಯಮಿತ ಕಟ್ಟುಪಾಡುಗಳಲ್ಲಿ ನೀಡಲಾಗುತ್ತದೆ. * ಈ ಸೊಬೆರಾನಾ ಸರಣಿಯ ಮೂರು ಲಸಿಕೆಗಳಲ್ಲಿ ಸೊಬೆರಾನಾ 2 ಕೂಡ ಒಂದಾಗಿದೆ, ಈ ಲಸಿಕೆಯನ್ನು ಫಿನ್ಲೆ ಇನ್ಸ್ಟಿಟ್ಯೂಟ್ ಸೆಂಟರ್ ಫಾರ್ ಮಾಲಿಕ್ಯುಲರ್ ಇಮ್ಯುನೊಲಾಜಿ ಹಾಗೂ ನ್ಯಾಷನಲ್ ಬಯೋಪ್ರೆಪರೇಷನ್ಸ್ ಸೆಂಟರ್ ಸಹಭಾಗಿತ್ತ್ವದಲ್ಲಿ ಅಭಿವೃದ್ಧಿಪಡಿಸಿದೆ. * ಒಟ್ಟಾರೆ ಕ್ಯೂಬಾದಲ್ಲಿ ಇತರ ನಾಲ್ಕು ಲಸಿಕೆಗಳನ್ನು ಸಹ ತಯಾರಿಸಲಾಗುತ್ತಿದೆ. * ಕ್ಯೂಬಾದಲ್ಲಿನ ಈ ಎಲ್ಲಾ 5 ಲಸಿಕೆಗಳು ಪ್ರೋಟೀನ್ ಲಸಿಕೆಗಳಾಗಿವೆ, ಹಾಗೂ ಈ ಎಲ್ಲ ಲಸಿಕೆಗಳನ್ನು SARS-CoV-2 ವೈರಸ್ನಿಂದ ಪಡೆದ ಪ್ರೋಟೀನ್'ನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. * ಪ್ರಸ್ತುತ ಕ್ಯೂಬಾ ದೇಶೀಯವಾಗಿ ಸೇವಿಸುವ 60-70 ಪ್ರತಿಶತದಷ್ಟು ಔಷಧಿಗಳನ್ನು ಉತ್ಪಾದಣೆ ಮಾಡುತ್ತದೆ, ಹಾಗೂ 11 ಲಸಿಕೆಗಳಿಂದ 13 ರೋಗಗಳಿಗೆ ಲಸಿಕೆ ನೀಡಲಾಗುತ್ತದೆ, ಇವುಗಳಲ್ಲಿ 8 ಲಸಿಕೆಗಳನ್ನು ಕ್ಯೂಬಾದಲ್ಲಿಯೇ ಉತ್ಪಾದಣೆ ಮಾಡಲಾಗುತ್ತದೆ.