Job Description: * ಶೀಘ್ರದಲ್ಲೇ ಬಿಹಾರ ರಾಜ್ಯದ ಪಾಟ್ನಾದಲ್ಲಿ ಬಹುನಿರೀಕ್ಷಿತ ರಾಷ್ಟ್ರೀಯ ಡಾಲ್ಫಿನ್ ಸಂಶೋಧನಾ ಕೇಂದ್ರ ಆರಂಭ, ಇದೀಗ ಈ ಸಂಶೋಧನಾ ಕೇಂದ್ರ ಸ್ಥಾಪನೆ ಪ್ರಕ್ರಿಯೆ ಪ್ರಾರಂಭವಾಗಿದೆ. * ಪ್ರಸ್ತುತ ಅಳಿವಿನಂಚಿನಲ್ಲಿರುವ ಗಂಗಾ ನದಿ ಡಾಲ್ಫಿನ್ ಸಂರಕ್ಷಣೆಗಾಗಿ ಈ ಸಂಶೋಧನಾ ಕೇಂದ್ರವನ್ನು ತೆರೆಯಲಾಗುವದಾಗಿ ತಿಳಿಸಿದ್ದಾರೆ. * ಗಂಗಾ ನದಿಯ ದಂಡೆಯ ಹತ್ತಿರವಿರುವ ಪಾಟ್ನಾ ವಿಶ್ವವಿದ್ಯಾಲಯದ ಆವರಣದಲ್ಲಿ 4,400 ಚದರ ಮೀ. ಪ್ರದೇಶದಲ್ಲಿ ಈ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವದು ಎಂದು ತಿಳಿಸಿದ್ದಾರೆ. * ಈ ಹಿಂದೆ 2019 ರ ಡಿಸೆಂಬರ್'ನಲ್ಲಿ ಪ್ರಧಾನ ಮಂತ್ರಿ ನೇತೃತ್ವದ ರಾಷ್ಟ್ರೀಯ ಗಂಗಾ ಕೌನ್ಸಿಲ್'ನ ಮೊದಲ ಸಭೆಯಲ್ಲಿ ಪ್ರಾಜೆಕ್ಟ್ ಟೈಗರ್'ಗೆ ತಾತ್ವಿಕ ಅನುಮೋದನೆಯನ್ನು ಪಡೆದುಕೊಂಡಿತ್ತು, ಇದೀಗ ಇದರ ಮಾದರಿಯಲ್ಲಿ ಪ್ರಾಜೆಕ್ಟ್ ಡಾಲ್ಫಿನ್'ನ್ನು ಆರಂಭಿಸಲಾಗುತ್ತಿದೆ ಇದರಿಂದ ಗಂಗೆಟಿಕ್ ಡಾಲ್ಫಿನ್'ನ್ನು ಉಳಿಸಲು ಕೈಗೊಂಡಿರುವ 'ವಿಶೇಷ ಸಂರಕ್ಷಣಾ ಕಾರ್ಯಕ್ರಮ'ವಾಗಿದೆ, ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈ ಯೋಜನೆಯನ್ನು ಜಾರಿಗೆ ತರಲಿದೆ. * ಡಾಲ್ಫಿನ್'ಗಳು ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತವೆ, ಪ್ರಸ್ತುತ ಭಾರತದಲ್ಲಿ ಅಂದಾಜು 3,000 ಡಾಲ್ಫಿನ್ಗಳಿವೆ ಅರ್ಧದಷ್ಟು ಬಿಹಾರ ರಾಜ್ಯದಲ್ಲಿವೆ. * ಗಂಗಾ ನದಿ ಡಾಲ್ಫಿನ್ (ಗಂಗೆಟಿಕ್ ಡಾಲ್ಫಿನ್) ಭಾರತದ ರಾಷ್ಟ್ರೀಯ ಜಲವಾಸಿ ಪ್ರಾಣಿಯಾಗಿದೆ. * ಪ್ರಪಂಚದಾದ್ಯಂತದ 4 ಸಿಹಿನೀರಿನ ಡಾಲ್ಫಿನ್ ಪ್ರಭೇದಗಳಿವೆ ಅವುಗಳಲ್ಲಿ ಗಂಗೆಟಿಕ್ ಡಾಲ್ಫಿನ್ ಕೂಡ ಒಂದಾಗಿದೆ, ಇನ್ನುಳಿದ 3 ಸಿಹಿನೀರಿನ ಡಾಲ್ಫಿನ್ಗಳು ಚೀನಾದ ಯಾಂಗ್ಟ್ಜಿ ನದಿಯಲ್ಲಿ (ಈ ಡಾಲ್ಫಿನ್ಗಳು ಅಳಿದುಹೋಗಿವೆ), ಪಾಕಿಸ್ತಾನದ ಸಿಂಧೂ ನದಿ ಹಾಗೂ ದಕ್ಷಿಣ ಅಮೆರಿಕಾದ ಅಮೆಜಾನ್ ನದಿಯಲ್ಲಿ ಕಂಡುಬರುತ್ತವೆ.