Job Description: * 2020 ರ ಟೋಕಿಯೊ ಒಲಿಂಪಿಕ್ಸ್'ಗೆ ಭಾರತೀಯ ಗಾಲ್ಫ್ ಆಟಗಾರ ಉದಯನ್ ಮಾನೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ, ಈ ಟೋಕಿಯೋ ಒಲಿಂಪಿಕ್ಸ್ 2021ರ ಜುಲೈ ಮತ್ತು ಆಗಸ್ಟ್ ತಿಂಗಳಲಿನಲ್ಲಿ ನಡೆಯಲಿದೆ. * ಉದಯನ್ ಮಾನೆ ಅವರು ಪುರುಷರ ಗಾಲ್ಫ್ ಸ್ಪರ್ಧೆಯಲ್ಲಿ 60 ಆಟಗಾರರ ಕ್ಷೇತ್ರದಲ್ಲಿ ಅನಿರ್ಬನ್ ಲಾಹಿರಿ ಯವರನ್ನು ಸೇರಿ ಕೊಂಡರು, ಲಾಹಿರಿ ಅವರು ಸತತವಾಗಿ 2 ನೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ, ಈ ಇವರು 2016 ರ ರಿಯೊ ಒಲಿಂಪಿಕ್ಸ್'ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. * ಉದಯನ್ ಮಾನೆಯವರು ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರ. * ಟೋಕಿಯೊದಲ್ಲಿ ನಡೆಯುವ ಪುರುಷರ ಗಾಲ್ಫ್ ಸ್ಪರ್ಧೆಯಲ್ಲಿ 35 ರಾಷ್ಟ್ರಗಳ 60 ಆಟಗಾರರು ಪಾಲ್ಗೊಳ್ಳಲಿದ್ದಾರೆ. * ಪ್ರಸ್ತುತ ಜಪಾನ್'ನ ಟೋಕಿಯೊದಲ್ಲಿ, ಟೋಕಿಯೊ ಒಲಿಂಪಿಕ್ಸ್ ಅಥವಾ 2020 ಬೇಸಿಗೆ ಒಲಿಂಪಿಕ್ಸ್ 2021 ರ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯುತ್ತದೆ.