Job Description: * 2021 ರ ಜುಲೈ. 8 ರಂದು ತಮಿಳುನಾಡು ರಾಜ್ಯದಲ್ಲಿ ಬೆಳೆದಿರುವ ಹಾಗೂ ಭೌಗೋಳಿಕ ಸೂಚನೆಗಳ (GI) ಪ್ರಮಾಣೀಕೃತ ಪಡೆದ ಮಧುರೈ ಮಲ್ಲಿಗೆ ಹಾಗೂ ಇತರ ಸಾಂಪ್ರದಾಯಿಕ ಹೂ'ಗಳಾಗಿರುವ ಲಿಲಿ, ಬಟನ್ ರೋಸ್, ಚಮಂತಿ ಹಾಗೂ ಮಾರಿಗೋಲ್ಡ್'ನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಇ'ಗೆ ರಫ್ತು ಮಾಡಲಾಗಿದೆ. * ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು ತಮಿಳುನಾಡು ರಾಜ್ಯದಲ್ಲಿ ಬೆಳೆದಿರುವ ಈ ಹೂವುಗಳನ್ನು ರಾಜ್ಯದ ನೀಲಕೋಟೈ, ದಿಂಡಿಗಲ್ ಮತ್ತು ಸತ್ಯಮಂಗಲಂನಿಂದ ನೋಂದಾಯಿತ ವ್ಯಾನ್ಗಾರ್ಡ್'ನಿಂದ ರಫ್ತು ಮಾಡಿದೆ. * ಯುಎಸ್, ಯುಎಇ, ಸಿಂಗಾಪುರ ದೇಶಗಳಿಗೆ 2021 ರ ಆರ್ಥಿಕ ವರ್ಷದಲ್ಲಿ ಬೆಳೆದಿರುವ 66.28 ಕೋಟಿ ರೂ. ಮೌಲ್ಯದ ಮಲ್ಲಿಗೆ ಮತ್ತು ಇತರ ಸಾಂಪ್ರದಾಯಿಕ ಹೂವುಗಳನ್ನು ರಫ್ತು ಮಾಡಲಾಗಿದೆ. * 66.28 ಕೋಟಿ ರೂ. ಮೌಲ್ಯದ ಹೂ'ಗಳಲ್ಲಿ 11.84 ಕೋಟಿ ರೂ. ಹೂವುಗಳನ್ನು ತಮಿಳುನಾಡು ರಾಜ್ಯದಿಂದ ರಫ್ತು ಮಾಡಲಾಗಿದೆ.