Job Description: * ಪ್ರಸ್ತುತ ಬ್ರಿಟನ್ ಮೂಲದ ಕೇರ್ನ್ ಎನರ್ಜಿ ಸಂಸ್ಥೆಯು ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ಯಾರಿಸ್'ನಲ್ಲಿರುವ ಭಾರತ ಸರ್ಕಾರದ 20 ಆಸ್ತಿ ಮುಟ್ಟುಗೋಲುಮಾಡಲು ಫ್ರೆಂಚ್ ನ್ಯಾಯಾಲಯವು ಕೇರ್ನ್ ಎನರ್ಜಿ ಸಂಸ್ಥೆಗೆ ಆದೇಶ ನೀಡಿದೆ. * ಪ್ರಸ್ತುತ ಫ್ರೆಂಚ್ ನ್ಯಾಯಾಲಯ ಕೇರ್ನ್ ಎನರ್ಜಿ ಸಂಸ್ಥೆಯು ಅರ್ಜಿಯನ್ನು ಪರಿಗಣಿಸಿ ಜೂನ್. 11 ರಂದು ಪ್ಯಾರಿಸ್ನಲ್ಲಿರುವ ಭಾರತಕ್ಕೆ ಸೇರಿದ ಆಸ್ತಿಯನ್ನು ವಶಪಡಿಸಿಕೊಳ್ಳಲು ಅನುಮತಿ ನೀಡಿದೆ. * ಭಾರತ ಸರ್ಕಾರದ 2014 ರ ಭಾರತ- ಬ್ರಿಟನ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಕೇರ್ನ್ ಎನರ್ಜಿ ಕಂಪನಿಗೆ ಅನಗತ್ಯವಾಗಿ ತೆರಿಗೆ ವಿಧಿಸುವ ಮೂಲಕ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿತ್ತು. * ನ್ಯಾಯಮಂಡಳಿಯು ನೀಡಿರುವ ತೀರ್ಪಿನ ಪ್ರಕಾರ ಭಾರತ ಸರ್ಕಾರವು ಕೇರ್ನ್ ಸಂಸ್ಥೆಗೆ 1.2 ಬಿಲಿಯನ್ ಡಾಲರ್ ಮತ್ತು ಅದಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ಸೂಚಿಸಿದೆ. ಆದರೆ ಭಾರತ ಸರಕಾರವು ಈ ತೀರ್ಪಿನ ನಂತರ ಕೂಡ ಹಣ ಪಾವತಿ ಮಾಡಿಲ್ಲ ಎಂದು ಕೇರ್ನ್ ಸಂಸ್ಥೆ ಆರೋಪಿಸಿ ಬೇರೆ ಬೇರೆ ದೇಶಗಳಲ್ಲಿನ ಭಾರತ ಸರ್ಕಾರದ ಆಸ್ತಿಯನ್ನು ಮುಟ್ಟುಗೋಲು ಪಡೆಯಲು ಮುಂದಾಗಿದೆ. * ಪ್ರಸ್ತುತ ಕೇರ್ನ್ ಎನರ್ಜಿ ಸಂಸ್ಥೆಯು ಅಮೆರಿಕ, ಬ್ರಿಟನ್, ನೆದರ್ಲೆಂಡ್, ಕೆನಡಾ, ಫ್ರಾನ್ಸ್, ಸಿಂಗಪುರ, ಜಪಾನ್, ಕೇಮನ್ ಐಲೆಂಡ್ಸ್ ದೇಶಗಳಲ್ಲಿನ ನ್ಯಾಯಾಲಯಗಳ ಮನವಿ ಮಾಡಿಕೊಂಡು ಬೇರೆ ಬೇರೆ ದೇಶಗಳಲ್ಲಿನ ಭಾರತ ಸರ್ಕಾರದ 70 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ವಶಪಡಿಸಿಕೊಳ್ಳಲು ಸಿದ್ಧವಾಗಿದೆ.