Job Description: * ಈ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಪ್ಯಾರಾ ಹೈಜಂಪ್ ಪಟುಯಾಗಿರುವ ಮಾರಿಯಪ್ಪನ್ ತಂಗವೇಲು ಅವರು ಮುನ್ನಡೆಸಲಿದ್ದಾರೆ. * ಈ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್ ಆಗಸ್ಟ್. 24 ರಿಂದ ಸೆಪ್ಟೆಂಬರ್. 5 ರವರೆಗೆ ನಡೆಯಲಿದೆ. * ಪ್ಯಾರಾ ಹೈಜಂಪ್ ಪಟು ಮಾರಿಯಪ್ಪನ್ ತಂಗವೇಲು ಅವರು 2016 ರಲ್ಲಿ ಬ್ರೆಜಿಲ್ನ ರಿಯೋ ಡಿ ಜನೈರೊದಲ್ಲಿ ನಡೆದ ಪ್ಯಾರಾಂಲಿಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. * ಮಾರಿಯಪ್ಪನ್ ತಂಗವೇಲು ಅವರು ತಮಿಳುನಾಡು ರಾಜದವರಾಗಿದ್ದು, ಕಳೆದ ವರ್ಷ ಇವರಿಗೆ "ಖೇಲ್ ರತ್ನ" ಕ್ರೀಡಾ ಪ್ರಶಸ್ತಿ ನೀಡಿ ಗೌರವ ಒಂದನೆಗಳನ್ನು ನೀಡಲಾಗಿತ್ತು.