Job Description: * ಅತುಲ್ ಕೇಶಪ್ ಅವರು ಇದೀಗ ಭಾರತಕ್ಕೆ ಅಮೆರಿಕದ ತಾತ್ಕಾಲಿಕ ರಾಯಭಾರಿಯಾಗಿ ನೇಮಕವಾಗಿದ್ದರೆ. * ಈ ಹಿಂದಿನ ರಾಯಭಾರಿಯಾಗಿ ಡೇನಿಯಲ್ ಸ್ಮಿತ್ ನಿವೃತ್ತಿಯಾದ ಕಾರಣದಿಂದಾಗಿ ತಾತ್ಕಾಲಿಕವಾಗಿ ಅತುಲ್ ಕೇಶಪ್ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. * ಅತುಲ್ ಕೇಶಪ್ ಅವರು ಇದಕ್ಕೂ ಮೊದಲು ಶ್ರೀಲಂಕಾ, ಮಾಲ್ಡೀವ್ಸ್ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು, ಹಾಗೂ 1994 ರಲ್ಲಿ ಅಮೆರಿಕ ವಿದೇಶಾಂಗ ಸೇವೆಗೆ ಸೇರ್ಪಡೆಯಾಗಿದ್ದರು. * ಅಮೆರಿಕದ ರಾಯಭಾರ ಕಚೇರಿಯಲ್ಲಿ ಅತುಲ್ ಅವರು 2005 ರಿಂದ 2008 ರ ಅವಧಿಯಲ್ಲಿ ಉಪರಾಜಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. * ರಾಷ್ಟ್ರೀಯ ಭದ್ರತಾ ಸಮಿತಿಯ ಉತ್ತರ ಆಫ್ರಿಕಾ ಮತ್ತು ಮಧ್ಯ ಪೂರ್ವ ಪ್ರದೇಶಗಳ ನಿರ್ದೇಶಕರಾಗಿ 2003 ರಲ್ಲಿ ಅತುಲ್ ಕೇಶಪ್ ಅವರು ಶ್ವೇತಭವನ ಸೇರಿದ್ದರು.