Job Description: * ಪ್ರಸ್ತುತ ಭಾರತೀಯ ವಾಯುಪಡೆ (IAF)ನ ಹೊಸ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ.ಆರ್.ಚೌಧರಿ ಅವರು ಇದೇ ಜುಲೈ.1 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. * ಈ ಮೊದಲು ಏರ್ ಮಾರ್ಷಲ್ ಎಚ್.ಎಸ್.ಅರೋರಾ ಅವರು ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಇವರ ನಿವೃತ್ತಿ ನಂತರ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ವಿ.ಆರ್.ಚೌಧರಿ ಅಧಿಕಾರ ವಹಿಸಿಕೊಂಡಿದ್ದಾರೆ. * ಪ್ರಸ್ತುತ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ಚೌಧರಿ ಅವರು 2020 ರ ಆಗಸ್ಟ್.01 ರಿಂದ ವೆಸ್ಟರ್ನ್ ಏರ್ ಕಮಾಂಡ್'ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು, ಹಾಗೂ ಇವರು ಫೈಟರ್ ಪೈಲಟ್ ಆಗಿ 1982 ರ ಡಿಸೆಂಬರ್ 29 ರಂದು IAF ನ ಫೈಟರ್ ಸ್ಟ್ರೀಮ್'ಗೆ ನಿಯೋಜನೆ ಗೊಂಡಿದ್ದರು. * ಏರ್ ಮಾರ್ಷಲ್ ರಿಚರ್ಡ್ ಜಾನ್ ಡಕ್ವರ್ತ್ ಅವರು ವಾಯುಪಡೆಯ ಸಿ ಸೆಂಟ್ರಲ್ ಏರ್ ಕಮಾಂಡ್'ನ ಎಒಸಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.