Job Description: * ಪ್ರಸ್ತುತ ಕೇಂದ್ರ ಸರ್ಕಾರವು ಅಟಾರ್ನಿ ಜನರಲ್ ಆಗಿರುವ ಕೆ. ವೇಣುಗೋಪಾಲ್ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಲು ನಿರ್ಧರಿಸಿದೆ. * ಸಾಮಾನ್ಯವಾಗಿ ಅಟಾರ್ನಿ ಜನರಲ್ ಅವರ 3 ವರ್ಷಗಳ ಅಧಿಕಾರ ಅವಧಿಯನ್ನು ಹೊಂದಿರುತ್ತದೆ, ಕೆ. ವೇಣುಗೋಪಾಲ್ ಅವರ ಮೊದಲ ಅವಧಿ ಕಳೆದ ವರ್ಷ ಮುಕ್ತಾಯವಾಗುತ್ತಿರುವ ಹಿನ್ನಲೆಯಿಂದ ಒಂದು ವರ್ಷದ ಅಧಿಕಾರ ಅವಧಿಯನ್ನು ಹೆಚ್ಚಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದರು, ಇವರು ಸುಪ್ರೀಂ ಕೋರ್ಟ್ನಲ್ಲಿ ನಿರ್ವಹಿಸುತ್ತಿರುವ ಉನ್ನತ ಮಟ್ಟದ ಪ್ರಕರಣಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಇವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಿಸಲು ತೀರ್ಮಾನಿಸಿದೆ. * ಕೆ. ವೇಣುಗೋಪಾಲ್ ಅವರು ಅಟಾರ್ನಿ ಜನರಲ್ ಆಗಿ 2017 ರ ಜುಲೈ 1 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.