Job Description: * ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್-19 ನ ಪರಿಸ್ಥಿತಿಯಲ್ಲಿ ಹೊಸ ಚೈತನ್ಯ ವೃದ್ಧಿಸುವ ಉದ್ದೇಶದಿಂದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (MSME) ಉದ್ಯಮಗಳಿಗೆ ಸಾಲ ನೀಡುವ ಸಲುವಾಗಿ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ. ನಿಗದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ, ಇದರ ಜೊತೆಯಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಣಕಾಸಿನ ನೆರವು ನೀಡಲಾಗುತ್ತದೆ ಮತ್ತು ಪ್ರವಾಸೋದ್ಯಮಕ್ಕೆ ಇಲಾಖೆಗೆ ಸಾಲದ ರೂಪದಲ್ಲಿ ಹಣ ಸಹಾಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಹಿಂದೆ ಘೋಷಣೆ ಮಾಡಿರುವಹಾಗೆ ಗರೀಬ ಕಲ್ಯಾಣ ಯೋಜನೆ ಅಡಿಯಲ್ಲಿ ಬಡವರಿಗೆ ನವೆಂಬರ್ ತಿಂಗಳಿಂತನಕ ಉಚಿತವಾಗಿ ಆಹಾರ ಧಾನ್ಯ ನೀಡಲು 93 ಸಾವಿರ ಕೋಟಿ, ಇದೀಗ ಆಹಾರ ಧಾನ್ಯ ವಿತರಣೆ ಮಾಡಲು ಹೆಚ್ಚುವರಿಯಾಗಿ 14,775 ಕೋಟಿ ರೂ. ನೀಡಲಾಗುವದು. * ಕೇಂದ್ರವು ತುರ್ತು ಸಾಲ ಖಾತರಿ ಯೋಜನೆಯ ಮೊತ್ತವನ್ನು 4.5 ಲಕ್ಷ ಕೋಟಿಗೆ ಏರಿಕೆ ಮಾಡಿದೆ, ಇದರ ಒಟ್ಟು ಮೊತ್ತ 3 ಲಕ್ಷ ಕೋಟಿ ರೂ. ಈ ತುರ್ತು ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಸಣ್ಣ ಉದ್ದಿಮೆಗಳಿಗೆ ಯಾವುದೇ ಅಡಮಾನಗಳಿಲ್ಲದೆ ಸಾಲ ನೀಡಿಕೆ. * ಆರೋಗ್ಯ ಸೇವಾ ವಲಯಕ್ಕಾಗಿ 50 ಸಾವಿರ ಕೋಟಿ ರೂ. ನಿಗದಿ ಮಾಡಿದ್ದಾರೆ. * ಭಾರತ್ನೆಟ್ ಯೋಜನೆಯ ಅಡಿಯಲ್ಲಿ ದೇಶದ ಎಲ್ಲ ಹಳ್ಳಿಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕ ನೀಡಲು 19,041 ಕೋಟಿ ರೂ. ನಿಗದಿ, ಹಾಗೂ ಹೆಚ್ಚುವರಿ ಮೊತ್ತ 61,109 ಕೋಟಿಗೆ ಏರಿಕೆಯಾಗಲಿದೆ. * ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಅರೋಗ್ಯ ಸೌಲಭ್ಯಗಳನ್ನು ಸಿದ್ಧಪಡಿಸಲು 23,220 ಕೋಟಿ ರೂ. ಘೋಷಣೆ. * ರೈತ ವರ್ಗಕ್ಕೆ ರಸಗೊಬ್ಬರ ಖರೀದಿಸಲು 14,775 ಕೋಟಿ ರೂ. ಸಬ್ಸಿಡಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರವಾಸೋದ್ಯಮ ಕ್ಷೇತ್ರದ ಏಜೆನ್ಸಿಗಳಿಗೆ 10 ಲಕ್ಷ ರೂ. ಸಾಲ ಹಾಗೂ ಪ್ರವಾಸಿ ಗೈಡ್ ಆಗಿ ಕಾರ್ಯ ನಿರ್ವಹಿಸುವವರಿಗೆ 1 ಲಕ್ಷ ರೂ. ನೀಡಲಾಗುವದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.