Job Description: * ಲಸಿಕೆ ನೋಂದಣಿ ಮಾಡುವ ಕೋವಿನ್ ಆಪ್ ಇದೀಗ ವಿಶ್ವದಾದ್ಯಂತ ಪಸರಿಸುತ್ತಿದೆ, ಈ ಕೋವಿನ್ ಆಪ್'ನ ತಂತ್ರಜ್ಞಾನವನ್ನು ಕೋವಿಡ್ ಲಸಿಕಾ ಅಭಿಯಾನದಲ್ಲಿ ಬಳಸಿಕೊಳ್ಳಲು ವಿಶ್ವದ ಸುಮಾರು 50 ಕ್ಕೂ ಹೆಚ್ಚು ರಾಷ್ಟ್ರಗಳು ಮುಂದಾಗಿವೆ. * ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ CEO ಮತ್ತು ಕೋವಿನ್ ಪೋರ್ಟಲ್ ನ ಮುಖ್ಯಸ್ಥರಾಗಿರುವ ಆರ್. ಎಸ್. ಶರ್ಮಾ ಅವರು ಈ ಮಾಹಿತಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಹಚ್ಚಿಕೊಂಡಿದ್ದಾರೆ. * ಪ್ರಸ್ತುತ ಮಧ್ಯ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ 50 ಕ್ಕೂ ಹೆಚ್ಚು ದೇಶಗಳು ಈ ಕೋವಿನ ತಂತ್ರಜ್ಞಾನ ಬಳಸಲು ಆಸಕ್ತಿ ತೋರಿವೆ ಎಂದಿದ್ದಾರೆ. * ಭಾರತವು ಈ ಕೋವಿನ್ ಪ್ಲಾಟ್ ಫಾರ್ಮ್'ನನ್ನು ವಿಶ್ವದಾದ್ಯಂತದ ದೇಶಗಳಿಗೆ ನೀಡುತ್ತಿದೆ ಎಂದು ಘೋಷಣೆ ಮಾಡಿದ್ದಾರೆ, ಇದೇ ಜುಲೈ. 5 ರಂದು "ಕೋವಿನ್ ಗ್ಲೋಬಲ್ ಕಾನ್ಕ್ಲೇವ್"ನಲ್ಲಿ ಪ್ರದರ್ಶನವಾಗಲಿದೆ.