Job Description: * ಪ್ರಸ್ತುತ COVID-19 ಗಾಗಿ ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್'ನ್ನು ಐಐಟಿ ದೆಹಲಿ ಅಭಿವೃದ್ಧಿಪಡಿಸಿದೆ, ಈ ಕಿಟ್ಟನ್ನು ಶಿಕ್ಷಣ ಸಚಿವ ಶ್ರೀ ಸಂಜಯ್ ಧೋತ್ರೆ ಬಿಡುಗಡೆಗೊಳಿಸಿದರು. * ಈ COVID-19 ಗಾಗಿ ರಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್'ನ್ನು ಡಾ.ಹರ್ಪಾಲ್ ಸಿಂಗ್ ನೇತೃತ್ವದ ಐಐಟಿ ದೆಹಲಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ, ಈ ಕಿಟ್ಟಿಗೆ SENSIT Rapid COVID-19 Ag Testing Kit ಎಂದು ಹೆಸರಿಟ್ಟಿದ್ದಾರೆ. * ಕ್ಷಿಪ್ರ ಇಮ್ಯುನೊಕ್ರೊಮ್ಯಾಟೋಗ್ರಾಫಿಕ್ ವಿಧಾನವನ್ನು ಬಳಸಿ ಕೊರೊನಾವೈರಸ್ ಪ್ರತಿಜನಕಕ್ಕೆ ನಿರ್ದಿಷ್ಟವಾದ ಮೊನೊಕ್ಲೋನಲ್ ಪ್ರತಿಕಾಯಗಳ ಆಧಾರದ ಮೇಲೆ ವೈರಸ್'ನ್ನು ಪತ್ತೆಹಚ್ಚಲಾಗುತ್ತದೆ.