Job Description: * 2020-21ನೇ ನೀತಿ ಆಯೋಗದ ವರದಿಯ ಪ್ರಕಾರ ಸುಸ್ಥಿರ ಅಭಿವೃದ್ಧಿಯ ಗುರಿಯನ್ನು (SDG) ಸಾಧಿಸುವ ನಿಟ್ಟಿನಲ್ಲಿ ದೇಶದಲ್ಲಿಯೇ ಛತ್ತೀಸ್ಗಡ ರಾಜ್ಯವು ಲಿಂಗ ಸಮಾನತೆಯ ಶ್ರೇಯಾಂಕದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದೆ. * ದೇಶದಲ್ಲಿ ಈ ಹಿಂದಿನ ವರ್ಷ ಲಿಂಗಸಮಾನತೆಯ ಶ್ರೇಯಾಂಕದಲ್ಲಿ ಛತ್ತೀಸ್ಗಡ ರಾಜ್ಯವು 43 ಅಂಕಗಳನ್ನೂ ಗಳಿಸಿ, 7 ನೇ ಸ್ಥಾನ ಪಡೆದುಕೊಂಡಿತ್ತು ಆದರೆ 2021 ನೇ ವರ್ಷದಲ್ಲಿ ರಾಜ್ಯವು 61 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದುಕೊಂಡಿದೆ. * ಲಿಂಗಸಮಾನತೆಯ ಶ್ರೇಯಾಂಕದಲ್ಲಿ ಕೇರಳ ರಾಜ್ಯವು 2 ನೇ ಸ್ಥಾನ ಪಡೆದುಕೊಂಡಿದೆ, ಆದರೆ ಬಿಹಾರ ರಾಜ್ಯವು ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ ಎಂದು ನೀತಿ ಆಯೋಗವು ವರದಿಯನ್ನು ಮಾಡಿದೆ. * ಭಾರತವು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯ ಶ್ರೇಯಾಂಕವನ್ನು ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಮೌಲ್ಯಮಾಪನವನ್ನು ಮಾಡಲಾಗಿದೆ ಎಂದು ನೀತಿ ಆಯೋಗ ತಿಳಿಸಿದೆ.