Job Description: * ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನೇತೃತ್ವದ ಕ್ಯಾಬಿನೆಟ್ ನಗರ ಪ್ರದೇಶದಲ್ಲಿರುವ ಸುಮಾರು 50 ವರ್ಷ ಅಥವಾ ಅದಕ್ಕಿಂತ ಪ್ರಾಚೀನವಾಗಿರುವ ಹಳೆಯ ಮರಗಳನ್ನು ರಕ್ಷಿಸುವ "ಹೆರಿಟೇಜ್ ಟ್ರೀ" ಪರಿಕಲ್ಪನೆಯ ಕ್ರಿಯಾ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. * ಪ್ರಸ್ತುತ ಮಹಾರಾಷ್ಟ್ರ ರಾಜ್ಯದಲ್ಲಿನ ನಗರ ಪ್ರದೇಶಗಳ ಮರಗಳನ್ನು ರಕ್ಷಣೆ ಮಾಡಲು ಮಹಾರಾಷ್ಟ್ರ ರಾಜ್ಯ ಸರ್ಕಾರವು ಮರ ಸಂರಕ್ಷಣೆ ಮತ್ತು ಸಂರಕ್ಷಣಾ ಕಾಯ್ದೆ 1975 ನ್ನು ತಿದ್ದುಪಡಿ ಮಾಡಿದೆ ಹಾಗೂ ಇದನ್ನು ಮಹಾರಾಷ್ಟ್ರದ ಪರಿಸರ ಇಲಾಖೆಯು ಈ ಯೋಜನೆ ಪ್ರಸ್ತಾಪಿಸಿದೆ. * ಮಹಾರಾಷ್ಟ್ರ ಸರ್ಕಾರವು ಈ ಮರ ಸಂರಕ್ಷಣೆ ಮತ್ತು ಸಂರಕ್ಷಣಾ ಕಾಯ್ದೆ ತಿದ್ದು ಪಡೆಮಾಡಿದ ನಂತರ ಮರಗಳನ್ನು ರಕ್ಷಿಸುವ ಉದ್ದೇಶದಿಂದಾಗಿ 'ಮಹಾರಾಷ್ಟ್ರ ರಾಜ್ಯ ಮರ ಪ್ರಾಧಿಕಾರ' ವನ್ನು ಆರಂಭಿಸಲಿದೆ ಮತ್ತು ಪ್ರಸ್ತುತ ಪುರಸಭೆಯ ಮುಖ್ಯ ಅಧಿಕಾರಿಯು ಮರ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.