Job Description: * ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಜೆಕ್ ಗಣರಾಜ್ಯದ ಬರ್ಬೊರಾ ಕ್ರೆಚಿಕೊವಾ ಅವರು ಹೊರಹೊಮ್ಮಿದ್ದಾರೆ. ಇವರು ಬರ್ಬೊರಾ ದೇಶದ ಕಟೆರಿನಾ ಸಿನಿಯಾಕೊವಾ ಅವರ ಜೊತೆಯಾಗಿ ಈ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. * ಫೈನಲ್ ಪಂದ್ಯದಲ್ಲಿ ಜೆಕ್ ಆಟಗಾರ್ತಿಯರು 6-4, 6-2 ಅಂತರದಿಂದ ಪೋಲೆಂಡ್ನ ಇಗಾ ಸ್ವಾಟೆಕ್ ಮತ್ತು ಅಮೆರಿಕದ ಬೆಥನಿ ಮಟೆಕ್ ಸ್ಯಾಂಡ್ಸ್ ಅವರನ್ನು ಸೋಲಿಸಿದ್ದಾರೆ. * ಪ್ರಸ್ತುತ 2000 ಇಸ್ವಿಯ ಬಳಿಕ ರೋಲ್ಯಾಂಡ್ ಗ್ಯಾರೋಸ್ನಲ್ಲಿ ಕ್ರೆಚಿಕೊವಾ ಅವರು ಮಹಿಳಾ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದ ಮೊದಲ ಆಟಗಾರ್ತಿಯಾರಾಗಿ ಹೊರ ಹೊಮ್ಮಿದ್ದಾರೆ, ಈ ಸಾಧನೆಯನ್ನು ಮಾಡಿದ 7 ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇವರದಾಗಿದೆ. * ಈ ಹಿಂದೆ ಫ್ರಾನ್ಸ್ನ ಮೇರಿ ಪಿಯರ್ಸ್ ಅವರು ೨೦೦೦ ರಲ್ಲಿ ಈ ಗೆಲುವನ್ನು ಸಾಧಿಸಿದ್ದರು. * 2018 ರಲ್ಲಿ ಕ್ರೆಜ್ಸಿಕೋವಾ-ಸಿನಿಯಾಕೋವಾ ಜೋಡಿ ಡಬಲ್ಸ್ ಪ್ರಶಸ್ತಿ ಸಾಧಿಸಿತ್ತು, ಮತ್ತೆ 2019 ರಲ್ಲಿ ವಿಂಬಲ್ಡ್ನಲ್ಲೂ ಡಬಲ್ಸ್ ಪ್ರಶಸ್ತಿ ಗಳಿಸಿತ್ತು. * ಪ್ರಸ್ತುತ ಕ್ರೆಜ್ಸಿಕೋವಾ ಅವರು ಗ್ರಾಂಡ್ ಸ್ಲಾಂನಲ್ಲಿ ಸಿಂಗಲ್ಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪ್ರಶಸ್ತಿ ಸಾಧಿಸಿದ 4ನೇ ಹಾಲಿ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.