Job Description: * ಪ್ರಸ್ತುತ ಭಾರತ ಕ್ರೀಡಾ ಪ್ರಾಧಿಕಾರವು ಈ ಬಾರಿಯ ಒಲಿಂಪಿಕ್ಸ್'ಗೆ ಭಾರತದ ಗ್ರೀಕೊ ರೋಮ್ ಕುಸ್ತಿಪಟುಗಳ ಪೈಕಿ ಯಾರೊಬ್ಬರಿಗೂ ಅವಕಾಶ ಸಿಗದ ಕಾರಣದಿಂದಾಗಿ ಗ್ರೀಕೊ ರೋಮನ್ ಕುಸ್ತಿ ಕೋಚ್ ತೆಮೊ ಕಜರಶಿವಿಲಿ ಅವರನ್ನು ವಜಾಗೊಳಿಸಿದೆ. * ಭಾರತವು 2019 ರಲ್ಲಿ ಜಾರ್ಜಿಯಾದ ತೆಮೊ ಕಜರಶಿವಿಲಿ ಅವರ ಜೊತೆಗೆ ಗ್ರೀಕೊ ರೋಮನ್ ಕುಸ್ತಿಪಟುಗಳಿಗೆ ಒಲಿಂಪಿಕ್ಸ್'ವರೆಗೂ ತರಬೇತಿ ನೀಡಲು ಒಪ್ಪಂದವನ್ನು ಮಾಡಿಕೊಂಡಿತ್ತು, ಈ ಕುಸ್ತಿ ತರಬೇತಿಯು ಸೋನೆಪತ್'ನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ನಡೆಸಲಾಗುತ್ತಿತ್ತು. * ಟೋಕಿಯೊ ಒಲಿಂಪಿಕ್ಸ್'ಗೆ ಫ್ರೀಸ್ಟೈಲ್ ಕುಸ್ತಿಪಟುಗಳ ಪೈಕಿ ತಲಾ 4 ಪುರುಷರು ಹಾಗೂ ಮಹಿಳೆಯರು ಟಿಕೆಟ್ ಪಡೆದುಕೊಂಡಿದ್ದಾರೆ, ಇದೀಗ ಭಾರತ ಕುಸ್ತಿ ಫೆಡರೇಷನ್'ನ ಶಿಫಾರಸಿನ ಮೇರೆಗೆ ಕೋಚ್ ಅವರ ಒಪ್ಪಂದವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರವು ತಿಳಿಸಿದೆ.