Job Description: * ಚೀನಾ ರಾಷ್ಟ್ರವು ಇದೀಗ ಮಿಲಿಟರಿ ಸಿಬ್ಬಂದಿಯನ್ನು ಅವಮಾನಿಸುವುದನ್ನು ನಿಷೇಧಿಸುವ ಮಸೂದೆಗೆ ಅನುಮೋದನೆ ನೀಡಿದೆ, ಪ್ರಸ್ತುತ ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ಸ್ಥಾಯಿ ಸಮಿತಿಯು ಈ ಮಸೂದೆಯನ್ನು ಮಂಡಿಸಿ ಅನುಮೋದನೆ ನೀಡಿದೆ. * ಮಿಲಿಟರಿ ಸಿಬ್ಬಂದಿಯನ್ನು ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಯಾವುದೇ ರೀತಿಯಲ್ಲಿ ಅವಹೇಳನ ಮಾಡುವದು ಮತ್ತು ಗೌರವಕ್ಕೆ ಧಕ್ಕೆ ತರುವದನ್ನು ನಿಷೇಧಿಸಲು ಈ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ಚೀನಾ ಸರ್ಕಾರಿ ಷಿನ್ಹುವಾ ಎಂಬ ಸುದ್ದಿವಾಹಿನಿ ವರದಿ ನೀಡಿದೆ. * ಈ ಹಿಂದೆ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಪೂರ್ವ ಲಡಾಖ್'ನ ಗಡಿಯಲ್ಲಿನ ಗಾಲ್ವನ್ ಕಣಿವೆಯಲ್ಲಿ ಸಂಘರ್ಷ ನಡೆದಿತ್ತು ಆ ಸಂದರ್ಭದಲ್ಲಿ ಭಾರತದ ಸೈನಿಕರು ಚೀನಾ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದರು, ಆದರೆ ಚೀನಾ ಈ ಮೊದಲು ಇದನ್ನು ಒಪ್ಪಿಕೊಂಡಿದಿಲ್ಲ, ನಂತರದ ದಿನಗಳಲ್ಲಿ ನಮ್ಮ 4ಸೈನಿಕರು ಹತ್ಯೆಯಾಗಿದ್ದಾರೆ ಎಂದು ಒಪ್ಪಿಕೊಂಡಿತು, ಈ ವಿಷಯದ ಬಗ್ಗೆ ಚೀನಾದ ಖ್ಯಾತ ಬ್ಲಾಗರ್' ಅವರು ಲೇಖನವನ್ನು ಬರೆದಿದ್ದರು, ಈ ಲೇಖನದಲ್ಲಿ ಯೋಧರನ್ನು ಅವಮಾನಿಸಲಾಗಿದೆ ಎಂದು ಅಲ್ಲಿನ ಕಮ್ಯುನಿಸ್ಟ್ ಸರ್ಕಾರವು ಕಿಡಿಕಾರಿ ಲೇಖಕ ಬ್ಲಾಗರ್'ಅವರಿಗೆ ಶಿಕ್ಷೆಯನ್ನು ನೀಡಿತ್ತು ಎಂದು ತಿಳಿಸಿದೆ.