Job Description: * ಪ್ರಸ್ತುತ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯ ಮನೆಗೆಲೆಸದವರ ನೇಮಕಾತಿಯನ್ನು ವ್ಯವಸ್ಥಿತವಾಗಿಸುವ ಮತ್ತು ಕಾನೂನಿನ ಚೌಕಟ್ಟಿನಲ್ಲೇ ಇವರಿಗೆ ರಕ್ಷಣೆ ದೊರಕಿಸಿಕೊಡುವಂತಹ ಒಡಂಬಡಿಕೆಯೊಂದಕ್ಕೆ ಇದೀಗ ಭಾರತ ಮತ್ತು ಕುವೈತ್ ರಾಷ್ಟ್ರಗಳು ಪರಸ್ಪರ ಒಪ್ಪಿಕೊಂಡು ಸಹಿ ಹಾಕಿವೆ. * ಪ್ರಸ್ತುತ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಕುವೈತ್'ನ ಅವರ ಸಹವರ್ತಿ ಶೇಖ್ ಅಹ್ಮದ್ ನಾಸೀರ್ ಅಲ್-ಮೊಹಮ್ಮದ್ ಅಲ್-ಸಭಾ ಅವರ ಸಮ್ಮುಖದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯ ಮನೆಗೆಲೆಸದವರಿಗೆ ರಕ್ಷಣೆ ದೊರಕಿಸಿಕೊಡುವಂತಹ ಒಡಂಬಡಿಕೆಯೊಂದಕ್ಕೆ ಕುವೈತ್ನಲ್ಲಿರುವ ಭಾರತೀಯ ರಾಯಭಾರಿ ಸಿ ಬಿ ಜಾರ್ಜ್ ಮತ್ತು ಕುವೈತ್'ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ಮಜಿದ್ ಅಹ್ಮದ್ ಅಲ್-ದಫೀರಿ ಅವರು ಪರಸ್ಪರ ಒಪ್ಪಿ ಪತ್ರಕ್ಕೆ ಸಹಿ ಹಾಕಿದರು.