Job Description: * ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಚೀನಾ ದೇಶದ ನೌಕಾಪಡೆಗಳ ನೌಕೆಗಳು ಹೆಚ್ಚುತ್ತಿರುವ ಹಿನ್ನಲೆಯಿಂದಾಗಿ ಸದ್ಯ ಭಾರತ ಮತ್ತು ಥಾಯ್ಲೆಂಡ್ ಜಂಟಿ ನೌಕಾ ಕವಾಯತಿನ 31ನೇ ಆವೃತ್ತಿಯ ಭಾಗವಾಗಿ ಈ ನೌಕಾಪಡೆಗಳು ಜಂಟಿಯಾಗಿ 3 ದಿನಗಳ ಕಾಲ ಅಂಡಮಾನ್ ಸಮುದ್ರದಲ್ಲಿ ಗಸ್ತು ತಿರುಗಾಟವನ್ನು ನಡೆಸಿವೆ ಎಂದು ತಿಳಿದಿದೆ. * ಹಿಂದೂ ಮಹಾಸಾಗರದಲ್ಲಿ ಎರಡು ದೇಶಗಳ ನೌಕಾಪಡೆಯ ಯುದ್ಧ ವಿಮಾನಗಳು, ಇದರ ಜೊತೆಗೆ ಭಾರತೀಯ ಮೂಲದ ಯುದ್ಧನೌಕೆ INS ಸರಯೂ ಮತ್ತು ಥಾಯ್ಲೆಂಡ್ನ ಕ್ರಾಬಿ ಹಡಗು ಈ ಗಸ್ತು ತಿರುಗಾಟದ ಕವಾಯತಿನಲ್ಲಿ ಭಾಗಿಯಾಗಿದ್ದವು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದರು. * ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಾಧ್ವಾಲ್ ಅವರು ತಿಳಿಸಿರುವ ಮಾಹಿತಿ ಪ್ರಕಾರ ಭಾರತ ಮತ್ತು ಥೈಲ್ಯಾಂಡ್ ಈ ಎರಡು ರಾಷ್ಟ್ರಗಳ ನೌಕಾಪಡೆಗಳು 2005 ರಿಂದ ಜಾಗತಿಕ ವ್ಯಾಪಾರ ಕಾರಣಗಳಿಂದ ಹಿಂದೂ ಮಹಾಸಾಗರದ ಪ್ರಮುಖ ಭಾಗವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು 2 ವರ್ಷಕ್ಕೊಮ್ಮೆ ಅಂತರರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ಜಂಟಿ ನೌಕಾ ಕವಾಯತು ನಡೆಸುತ್ತಾ ಬಂದಿವೆ ಎಂದಿದ್ದಾರೆ.